ನವದೆಹಲಿ, 10 ಜೂನ್ (ಹಿ.ಸ.) :
ಆ್ಯಂಕರ್ : ಕಳೆದ 11 ವರ್ಷಗಳಲ್ಲಿ ನಮ್ಮ ರಕ್ಷಣಾ ವಲಯದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ರಕ್ಷಣಾ ಉತ್ಪಾದನೆಗೆ ಬಂದಾಗ ಆಧುನೀಕರಣ ಮತ್ತು ಸ್ವಾವಲಂಬಿಯಾಗುವುದರ ಮೇಲೆ ಸ್ಪಷ್ಟ ಗಮನ ಹರಿಸಲಾಗಿದೆ. ಭಾರತವನ್ನು ಬಲಿಷ್ಠಗೊಳಿಸುವ ಸಂಕಲ್ಪದೊಂದಿಗೆ ಭಾರತದ ಜನರು ಹೇಗೆ ಒಗ್ಗೂಡಿದ್ದಾರೆ ಎಂಬುದನ್ನು ನೋಡಲು ಸಂತೋಷವಾಗುತ್ತದೆ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa