ಗದಗ, 10 ಜೂನ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ನರೇಗಲ್ಲ ಪಟ್ಟಣದಲ್ಲಿ ವರ್ಷಗಳಿಂದ ಹಲವು ಹಿರಿಯರ ಕ್ಷೇಮಾಭಿವೃದ್ಧಿ ಸಂಘ ಹಾಗು ನಿವೃತ್ತ ನೌಕರರ ಸಂಘಗಳು ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಅವರಿಗೆ ಸಭೆ ಸಮಾರಂಭನಡೆಸಲು ಸೂಕ್ತ ಜಾಗೆ ಇಲ್ಲ. ಆದ್ದರಿಂದ ಪಟ್ಟಣ ಪಂಚಾಯಿತಿ ವತಿಯಿಂದ ಸಂಘಕ್ಕೆ ಒಂದು ನಿವೇಶನ ಅಥವಾ ಕಟ್ಟಡವನ್ನು ನೀಡಬೇಕೆಂದು ಆಗ್ರಹಿಸಿ ಎರಡೂ ಸಂಘಗಳ ಸದಸ್ಯರು ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿಯವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎ. ಅರವಟಗಿಮಠ, ನಮ್ಮ ಸಂಘವು ಅಸ್ತಿತ್ವಕ್ಕೆ ಬಂದು ಈಗಾಗಲೇ 10 ವರ್ಷಗಳಾದವು. ಕಳೆದ ಐದಾರು ವರ್ಷಗಳ ಹಿಂದೆಯೇ ನಾವು ನಿವೇಶನ ಅಥವಾ ಕಟ್ಟಡಕ್ಕಾಗಿ ಮನವಿ ನೀಡಿದ್ದೇವೆ. ಆದರೆ ಈವರೆಗೂ ಅದಕ್ಕೆ ಯಾವ ಸ್ಪಂದನೆಯೂ ಸಿಕ್ಕಿಲ್ಲ ಎಂದರು.
ಹಿರಿಯ ನಾಗರಿಕರ ಸಂಘದ ಅಧ್ಯಕ್ಷ, ನ್ಯಾಯವಾದಿ ವೀರಣ್ಣ ದಿಂಡೂರ ಮಾತನಾಡಿ, ಹಿರಿಯ ನಾಗರಿಕರಿಗೆ ಬೇಕಾದ ಸೌಲಭ್ಯಗಳನ್ನು ಸ್ಥಳೀಯ ಪಟ್ಟಣ ಪಂಚಾಯಿತಿ ಒದಗಿಸಬೇಕೆಂಬುದು ಕೇಂದ್ರ ಸರಕಾರದ ನಿರ್ಧಾರವಾಗಿದೆ. ಆ ನಿರ್ಧಾರವನ್ನು ಇಲ್ಲಿ ಜಾರಿಗೊಳಿಸಿ ನಮಗೆ ಅನುಕೂಲ ಮಾಡಿಕೊಡಿ. ನಮಗೊಂದು ಜಾಗೆಯಂತಾದರೆ ನಮ್ಮ ಚಟುವಟಿಕೆಗಳನ್ನು ನಡೆಸಲು ನಮಗೆ ಅನುಕೂಲವಾಗುತ್ತದೆ ಎಂದರು. ಮನವಿ ಸ್ವೀಕರಿಸಿದ ಅಧ್ಯಕ್ಷ ಫಕೀರಪ್ಪ ಮಳ್ಳಿ ಮಾತನಾಡಿ, ಸಂಘದ ಮನವಿಯ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ಆದಷ್ಟು ಬೇಗನೆ ನಿಮಗೊಂದು
ಜಾಗೆಯ ವ್ಯವಸ್ಥೆಯನ್ನು ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಡಾ. ಆರ್. ಕೆ. ಗಚ್ಚಿನಮಠ, ವೀರಭದ್ರಪ್ಪ ಕೆರಿಯವರ, ಶಿವಯೋಗಿ ಜಕ್ಕಲಿ, ಎಂ.ಎಸ್. ದಡೇಸೂರಮಠ, ಸುರೇಶ ಬಾಗಲಿ, ಕಟ್ಟಿಮನಿ, ಕಲಾಲಬಂಡಿ, ಗುರುಪಾದಪ್ಪ ಬೆಲ್ಲದ, ಕಾಶಪ್ಪ ಸಂಗನಾಳ, ಶಿಸ್ತೆದಾರ, ಅರುಣ ಕುಲಕರ್ಣಿ ಮಲ್ಲಸಮುದ್ರಮಠ, ಎಸ್.ಕೆ. ಪಾಟೀಲ, ಎಚ್.ವೈ. ಮಣ್ಣೂಡ್ಡರ ಮುಂತಾದವರಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP