ಗಾಜಾ, 01 ಜೂನ್ (ಹಿ.ಸ.) :
ಆ್ಯಂಕರ್ : ಮೇ 13ರಂದು ಗಾಜಾದ ಖಾನ್ ಯೂನಿಸ್‌ನಲ್ಲಿ ನಡೆದ ಐಡಿಎಫ್‌ನ ನಿಖರ ವೈಮಾನಿಕ ದಾಳಿಯಲ್ಲಿ ಹಿರಿಯ ಹಮಾಸ್ ನಾಯಕ ಮುಹಮ್ಮದ್ ಸಿನ್ವಾರ್ ಸಹಿತ ಮೂರು ಪ್ರಮುಖ ಉಗ್ರರು ಹತ್ಯೆಯಾಗಿದ್ದಾರೆ ಎಂದು ಇಸ್ರೇಲ್ ದೃಢಪಡಿಸಿದೆ.
ಯುರೋಪಿಯನ್ ಆಸ್ಪತ್ರೆಯ ಕೆಳಗಿನ ಹಮಾಸ್ ಭೂಗತ ಕಮಾಂಡ್ ಸೆಂಟರ್ ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಸಿನ್ವಾರ ಸಾವನ್ನಪ್ಪಿದಾನೆ.
50 ಕ್ಕೂ ಹೆಚ್ಚು ಬಾಂಬ್‌ಗಳು 30 ಸೆಕೆಂಡುಗಳಲ್ಲಿ ದಾಳಿ ಮಾಡಿದ್ದು,ಆಸ್ಪತ್ರೆಗೆ ಯಾವುದೇ ಹಾನಿಯಾಗಿಲ್ಲ. ರಫಾ ಬ್ರಿಗೇಡ್ ಕಮಾಂಡರ್ ಮುಹಮ್ಮದ್ ಶಬಾನಾ ಮತ್ತು ಮತ್ತೋರ್ವ ಕಮಾಂಡರ್ ಮಹ್ದಿ ಕ್ವಾರಾ ಕೂಡ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa