ಡಿಆರ್‌ಐ ಕಾರ್ಯಾಚರಣೆ: ₹9.72 ಕೋಟಿ ಮೌಲ್ಯದ ಮೆಥಾಂಫೆಟಮೈನ್ ವಶ
ಐಜ್ವಾಲ್, 1 ಜೂನ್ (ಹಿ.ಸ.): ಆ್ಯಂಕರ್: ಮಿಜೋರಾಂನ ಐಜ್ವಾಲ್-ಚಂಫೈ ಹೆದ್ದಾರಿಯಲ್ಲಿ ಮೇ 30ರಂದು ಡಿಆರ್‌ಐ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 9.72 ಕೆಜಿ ಮೆಥಾಂಫೆಟಮೈನ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಲಾದ ಔಷಧಿಯ ಅಂತಾರಾಷ್ಟ್ರೀಯ ಮೌಲ್ಯ ಸುಮಾರು ₹9.72 ಕೋಟಿ. ಅಕ್ರಮ ಔಷಧಿ ಮ್ಯ
ಡಿಆರ್‌ಐ ಕಾರ್ಯಾಚರಣೆ: ₹9.72 ಕೋಟಿ ಮೌಲ್ಯದ ಮೆಥಾಂಫೆಟಮೈನ್ ವಶ


ಐಜ್ವಾಲ್, 1 ಜೂನ್ (ಹಿ.ಸ.):

ಆ್ಯಂಕರ್:

ಮಿಜೋರಾಂನ ಐಜ್ವಾಲ್-ಚಂಫೈ ಹೆದ್ದಾರಿಯಲ್ಲಿ ಮೇ 30ರಂದು ಡಿಆರ್‌ಐ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 9.72 ಕೆಜಿ ಮೆಥಾಂಫೆಟಮೈನ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಲಾದ ಔಷಧಿಯ ಅಂತಾರಾಷ್ಟ್ರೀಯ ಮೌಲ್ಯ ಸುಮಾರು ₹9.72 ಕೋಟಿ.

ಅಕ್ರಮ ಔಷಧಿ ಮ್ಯಾನ್ಮಾರ್‌ನಿಂದ ಭಾರತಕ್ಕೆ ಝೋಖಾವ್ಥರ್ ಗಡಿಯ ಮೂಲಕ ತರಲಾಗಿತ್ತು. ಮಾದಕ ವಸ್ತುಗಳನ್ನು ಕಾರಿನ ಹಿಂದಿನ ಸೀಟಿನೊಳಗಿನ ಬಚ್ಚಿಟ್ಟಿದ್ದು, ಅಧಿಕಾರಿಗಳು 10 ಪ್ಯಾಕೆಟ್‌ಗಳನ್ನು ಪತ್ತೆಹಚ್ಚಿ ಒರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ

ಜನವರಿ 2025ರಿಂದ ಡಿಆರ್‌ಐ ಮಿಜೋರಾಂನಲ್ಲಿ ₹72 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿ, 7 ಮಂದಿಯನ್ನು ಬಂಧಿಸಿದೆ. ಎನ್ ಡಿಪಿಎಸ್ ಕಾಯ್ದೆಯಡಿ ಕ್ರಮ ಕೈಗೊಂಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande