ಪ್ರಧಾನಿ ಮೋದಿ ಭೇಟಿಯಾದ ಎಡಿಬಿ ಅಧ್ಯಕ್ಷ
ನವದೆಹಲಿ, 1 ಜೂನ್ (ಹಿ.ಸ.): ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಅಧ್ಯಕ್ಷ ಮಸಾಟೋ ಕಾಂಡಾ ಅವರು ನವದೆಹಲಿಯಲ್ಲಿ ಭೇಟಿಯಾಗಿ ಭಾರತದಲ್ಲಿ ನಡೆದ ಪರಿವರ್ತನೆ ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು. ಭಾರತದ ತ್ವರಿತ ಬದಲಾವಣೆ ಅಸಂಖ್ಯಾತ ಜನರನ್
Meet


ನವದೆಹಲಿ, 1 ಜೂನ್ (ಹಿ.ಸ.):

ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಅಧ್ಯಕ್ಷ ಮಸಾಟೋ ಕಾಂಡಾ ಅವರು ನವದೆಹಲಿಯಲ್ಲಿ ಭೇಟಿಯಾಗಿ ಭಾರತದಲ್ಲಿ ನಡೆದ ಪರಿವರ್ತನೆ ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು.

ಭಾರತದ ತ್ವರಿತ ಬದಲಾವಣೆ ಅಸಂಖ್ಯಾತ ಜನರನ್ನು ಸಬಲೀಕರಣಗೊಳಿಸಿದೆ. ಈ ಬೆಳವಣಿಗೆಗೆ ಹೆಚ್ಚಿನ ವೇಗ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಚರ್ಚೆ ವೇಳೆ ಮೋದಿ ಹೇಳಿದರು.

ಕಾಂಡಾ ಅವರು, “ಭಾರತ 2047 ದೃಷ್ಟಿಕೋನ ಅತ್ಯಂತ ದಿಟ್ಟವಾಗಿದೆ. ಇದನ್ನು ಎಡಿಬಿ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಮುಂದಿನ ಐದು ವರ್ಷಗಳಲ್ಲಿ ನಗರ ಮೂಲಸೌಕರ್ಯ ಅಭಿವೃದ್ಧಿಗೆ $10 ಬಿಲಿಯನ್ ಹೂಡಿಕೆ ಮಾಡಲಾಗುತ್ತದೆ,” ಎಂದು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande