ಮಧ್ಯಪ್ರದೇಶ ಪ್ರವಾಸದಲ್ಲಿ ಪ್ರಧಾನಿ ಮೋದಿ
ನವದೆಹಲಿ, 31 ಮೇ (ಹಿ.ಸ.) : ಆ್ಯಂಕರ್ : ದೇವಿ ಅಹಲ್ಯಾ ಬಾಯಿ ಹೋಳ್ಕರ್ ಅವರ 300ನೇ ಜನ್ಮದಿನಾಚರಣೆ ಅಂಗವಾಗಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಇಂದು ನಡೆಯುವ ಲೋಕಮಾತಾ ಮಹಿಳಾ ಸಬಲೀಕರಣ ಮಹಾಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಅಹಲ್ಯಾ ಬಾಯಿ ಸ್ಮರಣಾರ್ಥ ಅಂಚ
Pm


ನವದೆಹಲಿ, 31 ಮೇ (ಹಿ.ಸ.) :

ಆ್ಯಂಕರ್ : ದೇವಿ ಅಹಲ್ಯಾ ಬಾಯಿ ಹೋಳ್ಕರ್ ಅವರ 300ನೇ ಜನ್ಮದಿನಾಚರಣೆ ಅಂಗವಾಗಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಇಂದು ನಡೆಯುವ ಲೋಕಮಾತಾ ಮಹಿಳಾ ಸಬಲೀಕರಣ ಮಹಾಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಅವರು ಅಹಲ್ಯಾ ಬಾಯಿ ಸ್ಮರಣಾರ್ಥ ಅಂಚೆಚೀಟಿ ಹಾಗೂ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಿ, ಜಾನಪದ ಹಾಗೂ ಸಾಂಪ್ರದಾಯಿಕ ಕಲೆಗೆ ಕೊಡುಗೆ ನೀಡಿದ ಮಹಿಳಾ ಕಲಾವಿದೆಗೆ ರಾಷ್ಟ್ರೀಯ ದೇವಿ ಅಹಲ್ಯಾ ಬಾಯಿ ಪ್ರಶಸ್ತಿ ವಿತರಿಸಲಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಶಿಪ್ರಾ ನದಿಗೆ ಸಂಬಂಧಿಸಿದ ₹860 ಕೋಟಿ ಮೌಲ್ಯದ ಘಾಟ್ ಯೋಜನೆಗಳಿಗೆ ಶಂಕುಸ್ಥಾಪನೆ ಜೊತೆಗೆ ದಾಟಿಯಾ ಮತ್ತು ಸತ್ನಾ ವಿಮಾನ ನಿಲ್ದಾಣಗಳನ್ನು ಉದ್ಘಾಟಿಸಿ, ಇಂದೋರ್ ಮೆಟ್ರೋ ಸೂಪರ್ ಆದ್ಯತಾ ಕಾರಿಡಾರ್‌ನಲ್ಲಿ ಪ್ರಯಾಣಿಕ ಸೇವೆಗೂ ಚಾಲನೆ ನೀಡಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande