ನವದೆಹಲಿ, 31 ಮೇ (ಹಿ.ಸ.) :
ಆ್ಯಂಕರ್ : ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಮೇ 27ರಿಂದ 29ರ ವರೆಗೆ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡಿ, ಅಮೆರಿಕದ ಉನ್ನತ ಅಧಿಕಾರಿಗಳೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಿದರು. ತಂತ್ರಜ್ಞಾನ, ವ್ಯಾಪಾರ, ರಕ್ಷಣಾ ಸಹಕಾರ ಮತ್ತು ಆರ್ಥಿಕ ನೀತಿಯ ಕುರಿತು ಸವಿವರ ಚರ್ಚೆ ನಡೆದಿದೆ.
ಕಾಂಪ್ಯಾಕ್ಟ್ ಉಪಕ್ರಮದ ಅನುಸರಣೆಯ ಭಾಗವಾಗಿ ಈ ಭೇಟಿಯು ನಡೆಯಿದ್ದು, ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳ ಪ್ರಗತಿ, ಐಟಿಎಆರ್ ನಿಯಮಗಳ ಸರಳೀಕರಣ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹಕಾರದ ಕುರಿತು ಒಪ್ಪಂದಗಳನ್ನು ಚರ್ಚಿಸಲಾಯಿತು.ಕ್ಯೂಯುಎಡಿ, I2U2 ಮತ್ತು IMEEC ವೇದಿಕೆಗಳಲ್ಲಿನ ಸಹಭಾಗಿತ್ವವನ್ನೂ ಉಲ್ಲೇಖಿಸಿ, ಹಿಂದೂ ಮಹಾಸಾಗರದಲ್ಲಿ ಸಹಕಾರ ಬಲಪಡಿಸುವ ಕುರಿತು ಒಗ್ಗಟ್ಟಿನ ಅಭಿಪ್ರಾಯ ವ್ಯಕ್ತವಾಯಿತು.
ಮಿಶ್ರಿ ಅವರು ಉದ್ಯಮ ಪ್ರತಿನಿಧಿಗಳು ಮತ್ತು ಚಿಂತಕರ ಚಾವಡಿ ಸದಸ್ಯರೊಂದಿಗೆ ಕೂಡ ಸಂವಾದ ನಡೆಸಿ, ಭಾರತ-ಅಮೆರಿಕ ಪಾಲುದಾರಿಕೆಯ ಮೂಲಗಳಾದ ತಂತ್ರಜ್ಞಾನ, ವ್ಯಾಪಾರ ಮತ್ತು ಪ್ರತಿಭೆ ಕುರಿತಾಗಿ ಚರ್ಚೆ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa