ಎರಡನೇ ದಿನವೂ ಕುಸಿದ ಚಿನ್ನ, ಬೆಳ್ಳಿ ಬೆಲೆ
ನವದೆಹಲಿ, 29 ಮೇ (ಹಿ.ಸ.) : ಆ್ಯಂಕರ್ : ದೇಶೀಯ ಚಿನ್ನಾಭರಣ ಮಾರುಕಟ್ಟೆಯಲ್ಲಿ ಇಂದು ಕೂಡ ಚಿನ್ನದ ಬೆಲೆ ಇಳಿಕೆಯಾಗಿದ್ದು, ಇದು ನಿರಂತರವಾಗಿ ಎರಡನೇ ದಿನವಾಗಿದೆ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ರೂ. 400 ರಿಂದ ರೂ. 440 ರವರೆಗೆ ಕಡಿಮೆಯಾಗಿದೆ. ದೆಹಲಿ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನ ರ
Gold rate


ನವದೆಹಲಿ, 29 ಮೇ (ಹಿ.ಸ.) :

ಆ್ಯಂಕರ್ : ದೇಶೀಯ ಚಿನ್ನಾಭರಣ ಮಾರುಕಟ್ಟೆಯಲ್ಲಿ ಇಂದು ಕೂಡ ಚಿನ್ನದ ಬೆಲೆ ಇಳಿಕೆಯಾಗಿದ್ದು, ಇದು ನಿರಂತರವಾಗಿ ಎರಡನೇ ದಿನವಾಗಿದೆ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ರೂ. 400 ರಿಂದ ರೂ. 440 ರವರೆಗೆ ಕಡಿಮೆಯಾಗಿದೆ.

ದೆಹಲಿ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನ ರೂ. 97,190 ಮತ್ತು 22 ಕ್ಯಾರೆಟ್ ಚಿನ್ನ ರೂ. 89,100 ಪ್ರತಿ 10 ಗ್ರಾಂ ದರದಲ್ಲಿ ವ್ಯಾಪಾರವಾಗುತ್ತಿದೆ. ಮುಂಬೈ, ಕೊಲ್ಕತ್ತಾ, ಚೆನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿಯೂ ದರ ಕುಸಿತವಾಗಿದೆ.

ಬೆಳ್ಳಿ ಮೌಲ್ಯವೂ ಇಳಿಕೆಯಾಗಿದ್ದು, ದೆಹಲಿಯಲ್ಲಿ ಕಿಲೋಗ್ರಾಂಗೆ ರೂ. 99,900 ರೂ ನಲ್ಲಿ ಮಾರಾಟವಾಗುತ್ತಿದೆ.

ಬೆಂಗಳೂರು, ಹೈದರಾಬಾದ್ ಮತ್ತು ಭುವನೇಶ್ವರ ಸೇರಿದಂತೆ ಕರ್ನಾಟಕ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳಲ್ಲಿಯೂ ಚಿನ್ನದ ದರ ಇಳಿಕೆಯಾಗಿದೆ. ಈ ನಗರಗಳಲ್ಲಿ 24 ಕ್ಯಾರೆಟ್ ಚಿನ್ನ ರೂ. 97,040 ಮತ್ತು 22 ಕ್ಯಾರೆಟ್ ಚಿನ್ನ ರೂ. 88,950 ಪ್ರತಿ 10 ಗ್ರಾಂ ದರದಲ್ಲಿ ಮಾರಾಟವಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande