ಆಗ್ರಾ, 28 ಮೇ (ಹಿ.ಸ.) :
ಆ್ಯಂಕರ್ : ಮಂಗೋಲಿಯಾದ 19 ಸದಸ್ಯರ ಸೇನಾ ನಿಯೋಗವು ಬ್ರಿಗೇಡಿಯರ್ ಜನರಲ್ ಒಂಟ್ಸ್ಗೋಯ್ಬಾಯರ್ ಲಖ್ಮ್ಜಿ ಅವರ ನೇತೃತ್ವದಲ್ಲಿ ಭಾರತೀಯ ಸೇನೆಯ ಶತ್ರುಜಿತ್ ಬ್ರಿಗೇಡ್ಗೆ ಭೇಟಿ ನೀಡಿತು. ಈ ಸಂದರ್ಭ, ವಾಯುಗಾಮಿ ಪಡೆಗಳ ವೃತ್ತಿಪರ ಸಾಮರ್ಥ್ಯಗಳ ಬಗ್ಗೆ ನಿಯೋಗ ನೇರ ಒಳನೋಟ ಪಡೆದಿತು.
ಭಾರತ-ಮಂಗೋಲಿಯಾ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರ ಬಲಪಡಿಸಲು ಈ ಭೇಟಿ ಸಹಕಾರಿಯಾಗಿದೆ ಎಂದು ಭಾರತೀಯ ಸೇನೆಯ ಸೂರ್ಯಕಮಾಂಡ್ ತನ್ನ ಅಧಿಕೃತ ಎಕ್ಸ ಖಾತೆಯಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa