ದಾವಣಗೆರೆ, 28 ಮೇ (ಹಿ.ಸ.):
ಆ್ಯಂಕರ್:ದಾವಣಗೆರೆ ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಉದ್ದಿಮೆದಾರರುಗಳಿಗೆ, ಉದ್ದಿಮೆ ಪರವಾನಗಿ ಶುಲ್ಕವನ್ನು ಪರಿಷ್ಕರಿಸಲಾಗಿದೆ ಎಂದು ಪಾಲಿಕೆಯ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.
ಪರಿಷ್ಕತ ಪಟ್ಟಿಯನ್ನು ಮಹಾನಗರಪಾಲಿಕೆಯ ವೆಬ್ಸೈಟ್ನಲ್ಲಿ http://www.davanagerecity.mrc.gov.in/en/home ಮತ್ತು ಕಛೇರಿಯ ಸೂಚನಾ ಫಲಕದಲ್ಲಿ ಅಳವಡಿಸಲಾಗಿದೆ. 30-03-2017ರಲ್ಲಿ ಮತ್ತು ಪುನಃ ದಿನಾಂಕ: 01-04-2024ರಲ್ಲಿ ದರ ಪರಿಷ್ಕರಣೆಗೊಂಡಿರುತ್ತದೆ. ಪರಿಷ್ಕರಣೆಗೊಂಡ ದರಗಳು ಅತೀ ಕಡಿಮೆ ಇರುವುದರಿಂದ ಪಾಲಿಕೆಯ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಉದ್ದಿಮೆ ಪರವಾನಿಗೆಯ ಶುಲ್ಕವನ್ನು ಪಾಲಿಕೆ ಆಡಳಿತಾಧಿಕಾರಿಗಳು ಜೂನ್-2025ರ ಮಾಹೆಯಿಂದ ಉದ್ದಿಮೆ ಪರವಾನಿಗೆ ಶುಲ್ಕವನ್ನು ಪರಿಷ್ಕರಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಥವಾ ಉದ್ದಿಮೆ ಪರವಾನಿಗೆಯನ್ನು ಪರಿಷ್ಕರಿಸಲು ಸಾರ್ವಜನಿಕರ ಆಕ್ಷೇಪಣೆಗಳಿದ್ದಲ್ಲಿ ಮಹಾನಗರಪಾಲಿಕೆಯ ವೆಬ್ ಸೈಟ್ನಲ್ಲಿ ಆಕ್ಷೇಪಣೆ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa