ಕುಖ್ಯಾತ ರೌಡಿ ಫಾತಿ ಮಥುರಾ ಪೊಲೀಸರ ಗುಂಡಿಗೆ ಬಲಿ
ಮಥುರಾ, 09 ಮಾರ್ಚ್ (ಹಿ.ಸ.) : ಆ್ಯಂಕರ್ : ಉತ್ತರಪ್ರದೇಶ,ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಿಗೆ ಬೇಕಾಗಿದ್ದ ಕುಖ್ಯಾತ ರೌಡಿ ಹಾಪುರದ ಗರ್ ಮುಕ್ತೇಶ್ವರ ನಿವಾಸಿ ಫಾತಿ ಅಲಿಯಾಸ್ ಅಸಾದ್ ಮಥುರಾ ಪೋಲಿಸರ ಗುಂಡಿಗೆ ಬಲಿಯಾಗಿದ್ದಾನೆ. ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನ
Encounter


ಮಥುರಾ, 09 ಮಾರ್ಚ್ (ಹಿ.ಸ.) :

ಆ್ಯಂಕರ್ : ಉತ್ತರಪ್ರದೇಶ,ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಿಗೆ ಬೇಕಾಗಿದ್ದ ಕುಖ್ಯಾತ ರೌಡಿ ಹಾಪುರದ ಗರ್ ಮುಕ್ತೇಶ್ವರ ನಿವಾಸಿ ಫಾತಿ ಅಲಿಯಾಸ್ ಅಸಾದ್ ಮಥುರಾ ಪೋಲಿಸರ ಗುಂಡಿಗೆ ಬಲಿಯಾಗಿದ್ದಾನೆ. ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಫಾತಿ ಮೃತಪಟ್ಟಿದ್ದಾನೆ.

ದೇಶದ ನಾನಾ ರಾಜ್ಯಗಳಲ್ಲಿ ನಡೆದ ಕೊಲೆ ಮತ್ತು ದರೋಡೆ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ ಎಂದು ಪೋಲಿಸರು ತಿಳಿಸಿದ್ದಾರೆ. ಭಾನುವಾರ ಮುಂಜಾನೆ ಫಾತಿ ತನ್ನ ಮೂವರು ಸಹಚರರೊಂದಿಗೆ ಥಾಣಾ ಹೆದ್ದಾರಿ ಪ್ರದೇಶದ ಕೃಷ್ಣ ಕುಂಜ್ ಕಾಲೋನಿಯಲ್ಲಿ ಅಡಗಿಕೊಂಡಿರುವ ಕುರಿತು ಮಾಹಿತ ದೊರೆತ ಹಿನ್ನೆಲೆಯಲ್ಲಿ ಆತನ ಬಂಧನಕ್ಕೆ ತೆರಳಿದ ಪೋಲಿಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದಕ್ಕೆ ಪ್ರತಿಯಾಗಿ ಪೋಲಿಸರು ನಡೆಸಿದ ಗುಂಡಿನ‌ ದಾಳಿಯಲ್ಲಿ ಫಾತಿ ಮೃತಪಟ್ಟಿರುವುದಾಗಿ ಡಿಐಜಿ ಶೈಲೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ. ಆತನ ಮೂವರು ಸಹಚರರು ಪರಾರಿಯಾಗಿದ್ದು ಅವರ ಪತ್ತೆಗೆ ಪೋಲಿಸರು ಜಾಲ ಬೀಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande