ವಾರಣಾಸಿ, 09 ಮಾರ್ಚ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ನ ಅಹಮದಾಬಾದ್ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಮಂಡಳಿಯ ಅಧ್ಯಕ್ಷ ದೇವಾಂಗ್ ಜಿತೇಂದ್ರಭಾಯಿ ದಾನಿ ನೇತೃತ್ವದ 12 ಸದಸ್ಯರ ತಂಡವು ವಾರಣಾಸಿ ಮಹಾನಗರ ಪಾಲಿಕೆಯ ಸ್ವಚ್ಛತಾ ವ್ಯವಸ್ಥೆ ಮತ್ತು ಸ್ಮಾರ್ಟ್ ಸಿಟಿಯ ಕಾರ್ಯವನ್ನು ವೀಕ್ಷಿಸಿದರು.
ಎರಡು ದಿನಗಳ ಉತ್ತರ ಪ್ರದೇಶ ಪ್ರವಾಸದಲ್ಲಿರುವ ಸಮಿತಿ ಕೊನೆಯ ದಿನದಂದು ನಗರದಲ್ಲಿ ಮನೆ-ಮನೆಗೆ ಕಸ ಸಂಗ್ರಹಣೆ ಮತ್ತು ಸ್ವಚ್ಛತಾ ವ್ಯವಸ್ಥೆಯ ಕಾರ್ಯ ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಸ್ಮಾರ್ಟ್ ಸಿಟಿ ಯೋಜನೆಯ ಐಟಿ ಅಧಿಕಾರಿ ರಾಹುಲ್ ತಿವಾರಿ ಆಧುನಿಕ ತಾಂತ್ರಿಕ ಸೇವೆಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa