ಲಕ್ನೋ, 08 ಮಾರ್ಚ್ (ಹಿ.ಸ.) :
ಆ್ಯಂಕರ್ : ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಸಹರಾನ್‌ಪುರ ತಂಡವು ಮೊರಾದಾಬಾದ್ ಪೊಲೀಸರ ಸಹಾಯದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಶಂಕಿತ ಭಯೋತ್ಪಾದಕ ಉಲ್ಫತ್ ಹುಸೇನ್‌ನನ್ನು ಬಂಧಿಸಿದೆ. ಬಂಧಿತ ಶಂಕಿತ ಭಯೋತ್ಪಾದಕ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆ. ಇದಕ್ಕೂ ಮೊದಲು, ಮೊರಾದಾಬಾದ್‌ನಲ್ಲಿ ಎಕೆ -56 ನೊಂದಿಗೆ ಬಂಧಿಸಲ್ಪಟ್ಟಿದ್ದ ಆತ 2007 ರಲ್ಲಿ ಜಾಮೀನು ಪಡೆದ ನಂತರ ಪರಾರಿಯಾಗಿದ್ದ.
ಶಂಕಿತ ಭಯೋತ್ಪಾದಕ ಉಲ್ಫತ್ ಹುಸೇನ್ ಅಲಿಯಾಸ್ ಮೊಹಮ್ಮದ್ ಸೈಫುಲ್ಲಾ ಇಸ್ಲಾಂ ಅಲಿಯಾಸ್ ಅಫ್ಜಲ್ ಅಲಿಯಾಸ್ ಪರ್ವೇಜ್ ಅಲಿಯಾಸ್ ಹುಸೇನ್ ಮಲಿಕ್ ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನ ಫಜಲಾಬಾದ್ ಗ್ರಾಮದ ನಿವಾಸಿ ಎಂದು ಎಟಿಎಸ್ ಶನಿವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಉಲ್ಫತ್ ಹುಸೇನ್ 1999 ರಿಂದ 2000 ರವರೆಗೆ ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ತರಬೇತಿ ಪಡೆದು, ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಉತ್ತರಪ್ರದೇಶ ಎಟಿಎಸ್ ತಂಡ ಬಂಧಿಸಿ ವಿಚಾರಣೆ ಕೈಗೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa