ನವದೆಹಲಿ, 08 ಮಾರ್ಚ್ (ಹಿ.ಸ.) :
ಆ್ಯಂಕರ್ : ಆರ್ಥಿಕವಾಗಿ ಸಬಲಳಾದ ಮಹಿಳೆ ಆತ್ಮವಿಶ್ವಾಸದ ನಿರ್ಧಾರ ತೆಗೆದುಕೊಳ್ಳುವವಳು, ಸ್ವತಂತ್ರ ಚಿಂತಕಿ, ತನ್ನ ಭವಿಷ್ಯದ ಶಿಲ್ಪಿ ಮತ್ತು ಆಧುನಿಕ ಭಾರತದ ನಿರ್ಮಾತೃ! ಮತ್ತು, ನಮ್ಮ ರಾಷ್ಟ್ರವು ಆರ್ಥಿಕವಾಗಿ ಸಬಲಳಾದ ಮಹಿಳೆಯರನ್ನು ನಿರ್ಮಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದೇಶ ಹಂಚಿಕೊಂಡಿದ್ದಾರೆ.
ಇದೇ ವೇಳೆ ಇಂದು ಪ್ರಧಾನಮಂತ್ರಿಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುತ್ತಿರುವ ಫ್ರಾಂಟಿಯರ್ ಮಾರ್ಕೆಟ್ಸ್‌ನ ಸ್ಥಾಪಕಿ ಅಜೈತಾ ಶಾ, ಮಹಿಳಾ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸಲು ನಿಜವಾಗಿಯೂ ಸಂತೋಷ ಪಡುತ್ತೇನೆ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa