ಮಣಿಪುರದಲ್ಲಿ ಸರ್ಕಾರಿ ಬಸ್ ಸೇವೆ ಪುನರಾರಂಭ
ಇಂಫಾಲ್, 08 ಮಾರ್ಚ್ (ಹಿ.ಸ.) : ಆ್ಯಂಕರ್ : ಮಣಿಪುರದ ಪ್ರಮುಖ ಮಾರ್ಗಗಳಲ್ಲಿ ಸುಮಾರು ಎರಡು ವರ್ಷಗಳ ನಂತರ ಶನಿವಾರ ಸರ್ಕಾರಿ ಬಸ್ ಸೇವೆಗಳು ಪುನರಾರಂಭಗೊಂಡಿವೆ. ಇಂಫಾಲದಿಂದ ಸೇನಾಪತಿ ಜಿಲ್ಲೆಗೆ ಕಾಂಗ್ಪೋಕ್ಪಿ ಮೂಲಕ ಮತ್ತು ಇಂಫಾಲದಿಂದ ಚುರಚಂದಪುರ ಜಿಲ್ಲೆಗೆ ಬಿಷ್ಣುಪುರ ಮೂಲಕ ಬಸ್ಸುಗಳು ಸಂಚರಿಸಿದವು.
Bus


ಇಂಫಾಲ್, 08 ಮಾರ್ಚ್ (ಹಿ.ಸ.) :

ಆ್ಯಂಕರ್ : ಮಣಿಪುರದ ಪ್ರಮುಖ ಮಾರ್ಗಗಳಲ್ಲಿ ಸುಮಾರು ಎರಡು ವರ್ಷಗಳ ನಂತರ ಶನಿವಾರ ಸರ್ಕಾರಿ ಬಸ್ ಸೇವೆಗಳು ಪುನರಾರಂಭಗೊಂಡಿವೆ. ಇಂಫಾಲದಿಂದ ಸೇನಾಪತಿ ಜಿಲ್ಲೆಗೆ ಕಾಂಗ್ಪೋಕ್ಪಿ ಮೂಲಕ ಮತ್ತು ಇಂಫಾಲದಿಂದ ಚುರಚಂದಪುರ ಜಿಲ್ಲೆಗೆ ಬಿಷ್ಣುಪುರ ಮೂಲಕ ಬಸ್ಸುಗಳು ಸಂಚರಿಸಿದವು.

ಇಂಫಾಲ್ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9 ಗಂಟೆಗೆ ಬಸ್‌ಗಳು ಹೊರಟವು. ಇದರೊಂದಿಗೆ, ರಾಜ್ಯಾದ್ಯಂತ ಜನರ ಮುಕ್ತ ಸಂಚಾರವನ್ನು ಪುನಃಸ್ಥಾಪಿಸಲಾಯಿತು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಮುಖ್ಯ ಕಾರ್ಯದರ್ಶಿ ಪಿ.ಕೆ. ಸಿಂಗ್ ತಿಳಿಸಿದ್ದಾರೆ. ಈ ಬಸ್ಸುಗಳು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಭದ್ರತೆಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಅನಾನುಕೂಲತೆಯನ್ನು ನಿವಾರಿಸಿ ರಾಜ್ಯದಲ್ಲಿ ಸಹಜ ಸ್ಥಿತಿ ಪುನಃಸ್ಥಾಪಿಸುವ ನಿಟ್ಟಿನಲ್ಲಿ ಇದು ಒಂದು ಹೆಜ್ಜೆ ಎಂದು ಹೇಳಿದ್ದಾರೆ. ಬಸ್ ಸೇವೆಗಳಿಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಂಫಾಲ-ಕಾಂಗ್ಪೋಕ್ಪಿ-ಸೇನಾಪತಿ, ಸೇನಾಪತಿ-ಕಾಂಗ್ಪೋಕ್ಪಿ-ಇಂಫಾಲ, ಇಂಫಾಲ-ಬಿಷ್ಣುಪುರ-ಚುರಾಚಂದಪುರ ಮತ್ತು ಚುರಾಚಂದಪುರ-ಬಿಷ್ಣುಪುರ-ಇಂಫಾಲ ಮಾರ್ಗಗಳಲ್ಲಿ ಬಸ್ ಸೇವೆಗಳು ಚಾಲನೆಯಲ್ಲಿವೆ. ಇದಲ್ಲದೆ, ಮಾರ್ಚ್ 12 ರಿಂದ ರಾಜ್ಯದಲ್ಲಿ ಹೆಲಿಕಾಪ್ಟರ್ ಸೇವೆಗಳು ಪ್ರಾರಂಭವಾಗಲಿವೆ ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande