ಡೆಹ್ರಾಡೂನ್, 06 ಮಾರ್ಚ್ (ಹಿ.ಸ.) :
ಆ್ಯಂಕರ್ : ಉತ್ತರಾಖಂಡನ ಮುಖ್ವಾದಲ್ಲಿನ ಗಂಗಾ ದೇವಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪೂಜೆ ಸಲ್ಲಿಸಿದರು.
ದೇವಾಲಯದ ಗರ್ಭಗುಡಿಯಲ್ಲಿ, ಗಂಗಾ ಮೂರ್ತಿಗೆ ಶ್ರೀ ಸೂಕ್ತದಿಂದ ಅಭಿಷೇಕ ಮಾಡಿದ ನಂತರ, ಪುರೋಹಿತರು ಗಂಗಾ ಲಹರಿಯ ದಿವ್ಯ ಮಂತ್ರಗಳೊಂದಿಗೆ ಪೂಜೆಯನ್ನು ನೆರವೇರಿಸಿದರು.
ಗಂಗಾ ಆರತಿಯೊಂದಿಗೆ ಪ್ರಧಾನಿಯವರು ದೇಶದ ಸಂತೋಷ ಮತ್ತು ಸಮೃದ್ಧಿಗಾಗಿ ಗಂಗಾ ಮಾತೆಗೆ ಪ್ರಾರ್ಥಿಸಿದರು.
ಪೂಜೆಯ ಜೊತೆಗೆ ಪ್ರಧಾನಿಯವರು ಗಂಗಾ ಮಾತೆಗೆ ಕಾಣಿಕೆ ಅರ್ಪಿಸಿದರು ಎಂದು ಪಂಚ ಗಂಗೋತ್ರಿ ದೇವಾಲಯ ಸಮಿತಿಯ ಸುರೇಶ್ ಸೆಮ್ವಾಲ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa