ನವದೆಹಲಿ, 06 ಮಾರ್ಚ್ (ಹಿ.ಸ.) :
ಆ್ಯಂಕರ್ : ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವೀಯ ಮಾರ್ಚ್ 7-8 ರಂದು ಹೈದರಾಬಾದ್‌ನಲ್ಲಿ ಉನ್ನತ ಮಟ್ಟದ ಚಿಂತನ ಶಿಬಿರದ ಅಧ್ಯಕ್ಷತೆ ವಹಿಸಲಿದ್ದಾರೆ. ಇದು 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಸಿದ್ಧತೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.
ಕನ್ಹಾ ಶಾಂತಿ ವನಂನಲ್ಲಿ ಆಯೋಜಿಸಲಾದ ಈ ಎರಡು ದಿನಗಳ ಚಿಂತನಶೀಲ ಅಧಿವೇಶನದಲ್ಲಿ ರಾಜ್ಯಗಳ,ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾ ಸಚಿವರು, ಹಿರಿಯ ಕ್ರೀಡಾ ಆಡಳಿತಗಾರರು, ಪ್ರಮುಖ ಸರ್ಕಾರಿ ಅಧಿಕಾರಿಗಳು ಮತ್ತು ಕ್ಷೇತ್ರದ ತಜ್ಞರು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.
ಭಾರತವನ್ನು ಕ್ರೀಡೆಯಲ್ಲಿ ಜಾಗತಿಕ ಮುಂಚೂಣಿಗೆ ತರಲು ಮಾರ್ಗಸೂಚಿಗಳನ್ನು ಸಭೆಯಲ್ಲಿ ರೂಪಿಸಲಾಗುವುದು ಎಂದು ಭಾರತೀಯ ವಾರ್ತಾ ಮತ್ತು ಮಾಹಿತಿ ಪ್ರಸಾರ ಇಲಾಖೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa