ಭಾರತೀಯ ಸಾಹಿತ್ಯ ಅಕಾಡೆಮಿ ವಾರ್ಷಿಕೋತ್ಸವ
ನವದೆಹಲಿ, 06 ಮಾರ್ಚ್ (ಹಿ.ಸ.) : ಆ್ಯಂಕರ್ : ಭಾರತೀಯ ಸಾಹಿತ್ಯ ಅಕಾಡೆಮಿ, ಮಾರ್ಚ್ 7, 2025 ರಿಂದ ಮಾರ್ಚ್ 12, 2025 ರವರೆಗೆ ನವದೆಹಲಿಯ ರವೀಂದ್ರ ಭವನದಲ್ಲಿ ವಾರ್ಷಿಕ ಸಾಹಿತ್ಯ ಮಹೋತ್ಸವ ಆಯೋಜಿಸಿದೆ. ಭಾರತ ಸರ್ಕಾರದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಉತ್ಸವವನ್
ಭಾರತೀಯ ಸಾಹಿತ್ಯ ಅಕಾಡೆಮಿ ವಾರ್ಷಿಕೋತ್ಸವ


ನವದೆಹಲಿ, 06 ಮಾರ್ಚ್ (ಹಿ.ಸ.) :

ಆ್ಯಂಕರ್ : ಭಾರತೀಯ ಸಾಹಿತ್ಯ ಅಕಾಡೆಮಿ, ಮಾರ್ಚ್ 7, 2025 ರಿಂದ ಮಾರ್ಚ್ 12, 2025 ರವರೆಗೆ ನವದೆಹಲಿಯ ರವೀಂದ್ರ ಭವನದಲ್ಲಿ ವಾರ್ಷಿಕ ಸಾಹಿತ್ಯ ಮಹೋತ್ಸವ ಆಯೋಜಿಸಿದೆ. ಭಾರತ ಸರ್ಕಾರದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಉತ್ಸವವನ್ನು ಉದ್ಘಾಟಿಸಲಿದ್ದಾರೆ.

23 ಭಾಷೆಗಳಲ್ಲಿ ಪ್ರತಿಷ್ಠಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಖ್ಯಾತ ಇಂಗ್ಲಿಷ್ ನಾಟಕಕಾರ ಮಹೇಶ್ ದತ್ತಾನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ವರ್ಷದ ಉಪನ್ಯಾಸವನ್ನು ಪ್ರಖ್ಯಾತ ಬರಹಗಾರ ಮತ್ತು ವಿದ್ವಾಂಸ ಉಪಮನ್ಯು ಚಟರ್ಜಿ ನೀಡಲಿದ್ದಾರೆ.

ಇದು ಏಷ್ಯಾದ ಅತಿದೊಡ್ಡ ಸಾಹಿತ್ಯ ಉತ್ಸವವಾಗಿದೆ. ದೇಶದ ಭಾಗಗಳಿಂದ 50 ಕ್ಕೂ ಹೆಚ್ಚು ಭಾಷೆಗಳನ್ನು ಪ್ರತಿನಿಧಿಸುವ ಸುಮಾರು 700 ಬರಹಗಾರರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande