ಬಳ್ಳಾರಿ : ಸಂಗನಕಲ್ಲು ಗುಡ್ಡ ವೀಕ್ಷಿಸಿದ ತಮಿಳುನಾಡು ವಿದ್ಯಾರ್ಥಿಗಳು
ಬಳ್ಳಾರಿ, 06 ಮಾರ್ಚ್ (ಹಿ.ಸ.) : ಆ್ಯಂಕರ್ : ತಮಿಳುನಾಡು ಸರ್ಕಾರದ ತಮಿಳುನಾಡು ಇನ್ಸಿಟ್ಯೂಟ್ ಆಫ್ ಆರ್ಕೆಲಾಜಿ ಸ್ನಾತಕೋತ್ತರ ಡಿಪೆÇ್ಲೀಮ ವಿದ್ಯಾರ್ಥಿಗಳು ನವಶಿಲಾಯುಗದ ಸಂಗನಕಲ್ಲು ಪ್ರಾಗೈತಿಹಾಸಿಕ ನೆಲೆ ಸಂಗನಕಲ್ಲು ಗುಡ್ಡವನ್ನು ಗುರುವಾರ ಭೇಟಿ ಮಾಡಿ, ಸಾಕಷ್ಟು ಮಾಹಿತಿಯನ್ನು ಪಡೆದಿದ್ದಾರೆ. ಸಂಗನ
ಬಳ್ಳಾರಿ : ಸಂಗನಕಲ್ಲು ಗುಡ್ಡ ವೀಕ್ಷಿಸಿದ ತಮಿಳುನಾಡು ವಿದ್ಯಾರ್ಥಿಗಳು


ಬಳ್ಳಾರಿ : ಸಂಗನಕಲ್ಲು ಗುಡ್ಡ ವೀಕ್ಷಿಸಿದ ತಮಿಳುನಾಡು ವಿದ್ಯಾರ್ಥಿಗಳು


ಬಳ್ಳಾರಿ : ಸಂಗನಕಲ್ಲು ಗುಡ್ಡ ವೀಕ್ಷಿಸಿದ ತಮಿಳುನಾಡು ವಿದ್ಯಾರ್ಥಿಗಳು


ಬಳ್ಳಾರಿ, 06 ಮಾರ್ಚ್ (ಹಿ.ಸ.) :

ಆ್ಯಂಕರ್ : ತಮಿಳುನಾಡು ಸರ್ಕಾರದ ತಮಿಳುನಾಡು ಇನ್ಸಿಟ್ಯೂಟ್ ಆಫ್ ಆರ್ಕೆಲಾಜಿ ಸ್ನಾತಕೋತ್ತರ ಡಿಪೆÇ್ಲೀಮ ವಿದ್ಯಾರ್ಥಿಗಳು ನವಶಿಲಾಯುಗದ ಸಂಗನಕಲ್ಲು ಪ್ರಾಗೈತಿಹಾಸಿಕ ನೆಲೆ ಸಂಗನಕಲ್ಲು ಗುಡ್ಡವನ್ನು ಗುರುವಾರ ಭೇಟಿ ಮಾಡಿ, ಸಾಕಷ್ಟು ಮಾಹಿತಿಯನ್ನು ಪಡೆದಿದ್ದಾರೆ.

ಸಂಗನಕಲ್ಲು ಗುಡ್ಡವನ್ನು ವೀಕ್ಷಿಸಿದ ನಂತರ ಬಳ್ಳಾರಿಯಲ್ಲಿರುವ ರಾಬರ್ಟ್ ಬ್ರೂಸ್ ಫುಟ್ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿದರು.

ಸಂಗನಕಲ್ಲು - 5000 ವರ್ಷದ ಹಿಂದೆ ದಕ್ಷಿಣ ಭಾರತದಲ್ಲಿಯೇ ಅತ್ಯಂತ ದೊಡ್ಡ ಜನವಸತಿ ಪ್ರದೇಶ ವಾಗಿತ್ತು. ಸಂಗನಕಲ್ಲುನಲ್ಲಿ ಆ ಕಾಲದಲ್ಲಿ ಬಳಕೆ ಮಾಡುತ್ತಿದ್ದ ಶಿಲಾಯುಗದ ಕಲ್ಲಿನ ಉಪಕಾರಣಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸುತ್ತಿದರು. ವಿಶ್ವದಲ್ಲಿಯೇ ಮೊಟ್ಟಮೊದಲಬಾರಿಗೆ ವ್ಯವಸ್ಥಿತವಾಗಿ ಕೃಷಿ, ಹೈನುಗಾರಿಕೆ ಮತ್ತು ಇನ್ನಿತರೆಗಳನ್ನು ಪ್ರಾರಂಭಿಸಿದ್ದ ಇಲ್ಲಿಯ ಜನರು ಅತ್ಯಂತ ಬುದ್ಧಿವಂತರಾಗಿದ್ದರು ಎಂದು

ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪೆÇ್ರಫೆಸರ್ ಅರ್ಜುನ್ ರಾವ್, ವಸ್ತುಸಂಗ್ರಹಲಯ ಸಮಿತಿಯ ಸದಸ್ಯ, ಪತ್ರಕರ್ತ ಎಂ. ಅಹಿರಾಜ್ ಅವರು ವಿವರಿಸಿದರು.

ವಸ್ತುಸಂಗ್ರಹಾಲಯದಲ್ಲಿ ಇರುವ ತಲೆಬುರುಡೆಯ ಮಾದರಿ (32 ವರ್ಷದಷ್ಟು ಹಿಂದಿನದು0 ಕಲ್ಲಿನ ಉಪಕರಣಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿ, ಅಚ್ಚರಿ ವ್ಯಕ್ತಪಡಿಸಿದರು. ಕುಡತಿನಿಯಲ್ಲಿ ಇರುವ ಬೂದಿಗುಡ್ಡವನ್ನು ನೋಡಿದರು.

ತಮಿಳುನಾಡು ಆರ್ಕೆಲಾಜಿ ಇಲಾಖೆಯ ಜಂಟಿ ನಿರ್ದೇಶಕ ಆರ್. ಶಿವಾನಂದಂ ಮತ್ತು ಶ್ರೀಮತಿ ಭಾಗ್ಯಲಕ್ಷ್ಮಿ ಅವರು ವಿದ್ಯಾರ್ಥಿಗಳ ತಂಡದ ನೇತೃತ್ವ ವಹಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande