ನಾಳೆ ಬೆಂಗಳೂರಿಗೆ ಅಮಿತ್ ಶಾ ಭೇಟಿ
ಬೆಂಗಳೂರು, 06 ಮಾರ್ಚ್ (ಹಿ.ಸ.) : ಆ್ಯಂಕರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಖಾಸಗಿ ಆಸ್ಪತ್ರೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಲಿದ್ದು, ಇದೇ ವೇಳೆ ರಾಜ್ಯ ಬಿಜೆಪಿ ಮುಖಂಡರನ್ನು ಭೇಟಿಯಾಗಲಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಬಣ ಬಡಿದಾಟದ ವೇಳೆ ಅಮಿತ್
Amita   sha


ಬೆಂಗಳೂರು, 06 ಮಾರ್ಚ್ (ಹಿ.ಸ.) :

ಆ್ಯಂಕರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.

ಖಾಸಗಿ ಆಸ್ಪತ್ರೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಲಿದ್ದು, ಇದೇ ವೇಳೆ ರಾಜ್ಯ ಬಿಜೆಪಿ ಮುಖಂಡರನ್ನು ಭೇಟಿಯಾಗಲಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಬಣ ಬಡಿದಾಟದ ವೇಳೆ ಅಮಿತ್ ಶಾ ರಾಜ್ಯ ಭೇಟಿ ಮಹತ್ವ ಪಡೆದುಕೊಂಡಿದೆ.

ರಾಜ್ಯಾಧ್ಯಕ್ಷರ ಬದಲಾವಣೆಗೆ ಶಾಸಕ ಯತ್ನಾಳ ಬಣ ಪಟ್ಟು ಹಿಡಿದಿದ್ದು ವಿಜಯೇಂದ್ರ ವಿರುದ್ದ ಅಮಿತ್ ಶಾ ಅವರಿಗೆ ದೂರು ನೀಡಲು ಸಜ್ಜಾಗಿದೆ.

ಇದಕ್ಕೆ ಪ್ರತೀಕಾರವಾಗಿ ವಿಜಯೇಂದ್ರ ಬಣ ತಯಾರಿ ನಡೆಸಿದ್ದು ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಒತ್ತಡ ಹೇರಲು ಸಿದ್ದತೆ ನಡೆಸಿದೆ.

ಆದರೆ ಈ ಕುರಿತು ಅಮಿತ್ ಶಾ ಭೇಟಿಗೆ ಎರಡು ಬಣಗಳಿಗೆ ಸಮಯ ನಿಗದಿಯಾಗಿಲ್ಲ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande