ಚಂಪಾರಣ, 05 ಮಾರ್ಚ್ (ಹಿ.ಸ.) :
ಆ್ಯಂಕರ್ : ಸಶಸ್ತ್ರ ಸೀಮಾ ಬಲ್ 47 ನೇ ಬೆಟಾಲಿಯನ್‌ನ ಸೈನಿಕರು ಭಾರತದ ಮೂಲಕ ನೇಪಾಳಕ್ಕೆ ಪ್ರವೇಶಿಸುತ್ತಿದ್ದ ಉಕ್ರೇನಿಯನ್ ಪ್ರಜೆಯನ್ನು ಭಾರತ-ನೇಪಾಳ ಗಡಿಯಲ್ಲಿ ಬಂಧಿಸಿದ್ದಾರೆ. ಬಂಧಿತ ನಾಗರಿಕನ ಹೆಸರು ಬೋರಿ ಬೊಂಡರೆಂಕೊ ಎಂದು ತಿಳಿದು ಬಂದಿದೆ.
ಭಾರತೀಯ ವೀಸಾ ಅವಧಿ ಮುಗಿದ ಹಿನ್ನೆಲೆಯಲ್ಲಿ ಅಕ್ರಮವಾಗಿ ನೇಪಾಳ ಪ್ರವೇಶಕ್ಕೆ ಯತ್ನಿಸುವ ವೇಳೆ ಗಡಿಯಲ್ಲಿ ತಪಾಸಣೆ ನಡೆಸುವಾಗ, ಎಸ್‌ಎಸ್‌ಬಿ ಸಿಬ್ಬಂದಿ ಅವರ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಪರಿಶೀಲಿಸಿದಾಗ, ವೀಸಾ ಅವಧಿ ಮುಗಿದಿರುವುದು ಕಂಡು ಬಂದಿದೆ. ಇದಾದ ನಂತರ, ಎಸ್‌ಎಸ್‌ಬಿ ಬೋರಿ ಬೊಡರೆಂಕೊನನ್ನು ಹರೈಯಾ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಉಕ್ರೇನ್ ಪ್ರಜೆ ನೇಪಾಳಕ್ಕೆ ಭೇಟಿ ನೀಡಿ ಕರೆನ್ಸಿ ವಿನಿಮಯ ಮಾಡಿಕೊಳ್ಳಲು ಬಂದಿರುವುದಾಗಿ ತಿಳಿಸಿದ್ದಾನೆ ಎಂದು ಪೋಲಿಸರು ಹೇಳಿದ್ದಾರೆ. ಭಾರತೀಯ ವೀಸಾ ಅವಧಿ ಮುಗಿದ ಕಾರಣ, ಬೋರಿ ಬೊಡರೆಂಕೊ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹರೈಯಾ ಹಿರಿಯ ಪೋಲಿಸ್ ಅಧಿಕಾರಿ ಅಂಜನ್ ಕುಮಾರ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa