ಇಂಫಾಲ್, 05 ಮಾರ್ಚ್ (ಹಿ.ಸ.) :
ಆ್ಯಂಕರ್ : ಮಣಿಪುರ ಪೊಲೀಸರು ರಾಜ್ಯದ ನಾನಾ ಸ್ಥಳಗಳಿಂದ ಐವರು ಉಗ್ರಗಾಮಿಗಳನ್ನು ಬಂಧಿಸಿದ್ದಾರೆ. ಈ ಉಗ್ರರನ್ನು ಚುರಚಂದಪುರ, ಇಂಫಾಲ ಪೂರ್ವ ಮತ್ತು ಬಿಷ್ಣುಪುರ ಜಿಲ್ಲೆಗಳಿಂದ ಬಂಧಿಸಲಾಗಿದೆ. ಇವರೆಲ್ಲರೂ ನಿಷೇಧಿತ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ.
ಚುರಾಚಂದ್‌ಪುರದ ಬೆಥೆಲ್ ಪ್ರದೇಶದಿಂದ ಬುಧವಾರ 19 ವರ್ಷದ ಯುವಕ ಮತ್ತು ಮೂವರು ಅಪ್ರಾಪ್ತ ವಯಸ್ಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರೆಲ್ಲರೂ ನಿಷೇಧಿತ ಯುನೈಟೆಡ್ ಕುಕಿ ರಾಷ್ಟ್ರೀಯ ಸೇನೆಯ ಸದಸ್ಯರಾಗಿದ್ದಾರೆ ಇವರು ಸುಲಿಗೆ,ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದು. ಅವರಿಂದ ಎರಡು ಪಿಸ್ತೂಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತೊಂದೆಡೆ, ನಿಷೇಧಿತ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಕ್ಷದ (ಎಂಎಫ್‌ಎಲ್) ಸದಸ್ಯ ಯುಮ್ನಮ್ ಸುರೇಶ್ ಮೈಟೈ ಈತನನ್ನು ಇಂಫಾಲ್ ಬಂಧಿಸಲಾಗಿದೆ.
ಆತನಿಂದ 10 ಹ್ಯಾಂಡ್ ಗ್ರೆನೇಡ್‌ಗಳು, 10 ಟ್ಯೂಬ್ ಲಾಂಚಿಂಗ್ ಸಾಧನಗಳು, ಒಂದು ಮದ್ದುಗುಂಡು ಪೆಟ್ಟಿಗೆ, ಒಂದು ದ್ವಿಚಕ್ರ ವಾಹನ, ಮೂರು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚುರಾಚಂದ್‌ಪುರ ಜಿಲ್ಲೆಯ ಥಿಂಗ್‌ಕಾಂಗ್‌ಫೈ ಪ್ರದೇಶದಲ್ಲಿ ಪೊಲೀಸರು ಮತ್ತೊಬ್ಬ ತಂಗ್‌ಸುವಾನ್‌ಮುವಾನ್‌ನನ್ನು ಬಂಧಿಸಿದ್ದಾರೆ. ಆತನಿಂದ 132 ಸೋಪ್ ಬಾಕ್ಸ್‌ಗಳಲ್ಲಿ ಹೆರಾಯಿನ್, ಒಂದು ಮೊಬೈಲ್ ಫೋನ್ ಮತ್ತು ನಾಲ್ಕು ಚಕ್ರದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಬಿಷ್ಣುಪುರ ಜಿಲ್ಲೆಯಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ, ಮಾಜಿ ಪ್ರೀಪಾಕ್ ಕಾರ್ಯಕರ್ತ ಹುಯಿದ್ರೊಮ್ ರೋಮೆನ್ ಸಿಂಗ್ (44) ಮತ್ತು ಹುಯಿದ್ರೊಮ್ ನರೇಶ್ ಸಿಂಗ್ (32) ಎಂಬ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಂದು ಪಿಸ್ತೂಲ್, ಖಾಲಿ ಮ್ಯಾಗಜೀನ್ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa