ನವದೆಹಲಿ, 05 ಮಾರ್ಚ್ (ಹಿ.ಸ.) :
ಆ್ಯಂಕರ್ : ಕೃತಕ ಬುದ್ಧಿಮತ್ತೆ ಸಂಶೋಧನೆಗಾಗಿ ಭಾರತವು ರಾಷ್ಟ್ರೀಯ ಭಾಷಾ ಮಾದರಿಯನ್ನು ಸ್ಥಾಪಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ವಲಯದಲ್ಲಿ ಹೂಡಿಕೆ ಮಾಡುವಂತೆ ಅವರು ಕೈಗಾರಿಕಾ ಉದ್ಯಮಿಗಳಿಗೆ ಮನವಿ ಮಾಡಿದರು.
ಬಜೆಟ್ ನಂತರದ ಉದ್ಯೋಗ ಸೃಷ್ಟಿ ಕುರಿತ ವೆಬಿನಾರ್‌ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿ. ಈ ವರ್ಷದ ಕೇಂದ್ರ ಬಜೆಟ್ ಬಲವಾದ ಕಾರ್ಯಪಡೆ ಮತ್ತು ಬೆಳೆಯುತ್ತಿರುವ ಆರ್ಥಿಕತೆಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.
ದೇಶದ ಭವಿಷ್ಯವು ನಾವೀನ್ಯತೆಯಲ್ಲಿ ಮಾಡಲಾಗುವ ಹೂಡಿಕೆಗಳಿಂದ ನಿರ್ಧರಿಸಲ್ಪಡುತ್ತದೆ ಎಂದ ಅವರು, ಭಾರತೀಯ ಆರ್ಥಿಕತೆಗೆ ಎಐ ಹಲವಾರು ಲಕ್ಷ ಕೋಟಿ ರೂಪಾಯಿಗಳ ಬೆಳವಣಿಗೆಯನ್ನು ನೀಡಬಲ್ಲದು.ಎಐ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಭಾರತವು ರಾಷ್ಟ್ರೀಯ ಭಾಷಾ ಮಾದರಿಯನ್ನು ಸ್ಥಾಪಿಸುತ್ತದೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa