ಪಂಜಾಬ್‌ : ನೂರಾರು ರೈತ ನಾಯಕರ ಬಂಧನ
ಚಂಡೀಗಡ, 05 ಮಾರ್ಚ್ (ಹಿ.ಸ.) : ಆ್ಯಂಕರ್ : ಪಂಜಾಬ್ ರೈತ ಸಂಘಟನೆಗಳು ಬುಧವಾರ ಚಂಡೀಗಢಕ್ಕೆ ಮೆರವಣಿಗೆ ನಡೆಸುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ, ಪಂಜಾಬ್ ಪೊಲೀಸರು ನೂರಾರು ರೈತರನ್ನು ವಶಕ್ಕೆ ಪಡೆದಿದ್ದಾರೆ, ಚಂಡೀಗಢಕ್ಕೆ ಹೋಗುವ ಎಲ್ಲಾ 12 ರಸ್ತೆಗಳನ್ನು ಬುಧವಾರ ಬೆಳಿಗ್ಗೆಯಿಂದ ಮುಚ್ಚಲಾಗಿದೆ. ಪಂಜಾಬ್
Arrest


ಚಂಡೀಗಡ, 05 ಮಾರ್ಚ್ (ಹಿ.ಸ.) :

ಆ್ಯಂಕರ್ : ಪಂಜಾಬ್ ರೈತ ಸಂಘಟನೆಗಳು ಬುಧವಾರ ಚಂಡೀಗಢಕ್ಕೆ ಮೆರವಣಿಗೆ ನಡೆಸುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ, ಪಂಜಾಬ್ ಪೊಲೀಸರು ನೂರಾರು ರೈತರನ್ನು ವಶಕ್ಕೆ ಪಡೆದಿದ್ದಾರೆ, ಚಂಡೀಗಢಕ್ಕೆ ಹೋಗುವ ಎಲ್ಲಾ 12 ರಸ್ತೆಗಳನ್ನು ಬುಧವಾರ ಬೆಳಿಗ್ಗೆಯಿಂದ ಮುಚ್ಚಲಾಗಿದೆ. ಪಂಜಾಬ್, ಹರಿಯಾಣ ಮತ್ತು ಚಂಡೀಗಢ ಪೊಲೀಸರು ಎಲ್ಲಾ ಗಡಿ ಪ್ರದೇಶಗಳನ್ನು ಬಂದ್ ಮಾಡಿ ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗಿನ ಮಾತುಕತೆ ವಿಫಲವಾದ ನಂತರ, ರೈತರು ಬುಧವಾರ ಚಂಡೀಗಢಕ್ಕೆ ಮೆರವಣಿಗೆ ನಡೆಸುವುದಾಗಿ ಘೋಷಿಸಿದ್ದರು. ಮಂಗಳವಾರ, ಪಂಜಾಬ್ ಪೊಲೀಸರು ರೈತ ಮುಖಂಡರಾದ ಬಲ್ಬೀರ್ ಸಿಂಗ್ ರಾಜೇವಾಲ್, ಜೋಗಿಂದರ್ ಸಿಂಗ್ ಉಗ್ರನ್ ಸೇರಿದಂತೆ ನೂರಾರು ರೈತರನ್ನು ಬಂಧಿಸಿದ್ದರು.

ರೈತ ನಾಯಕರ ಬಂಧನದಿಂದ ಪಂಜಾಬ್‌ನಲ್ಲಿ ರೈತ ಹೋರಾಟ ರಾಜಕೀಯ ತಿರುವು ಪಡೆದುಕೊಂಡಿದೆ. ಬುಧವಾರ ಮುಂಜಾನೆ, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಚರಂಜಿತ್ ಸಿಂಗ್ ಚನ್ನಿ ಪೋಲಿಸ್ ಠಾಣೆಯಲ್ಲಿ ರೈತ ಮುಖಂಡರನ್ನು ಭೇಟಿ ಮಾಡಿದರು. ರೈತ ನಾಯಕರ ಬಂಧನವನ್ನು ಖಂಡಿಸಿ ಅಕಾಲಿ ದಳ ಪಂಜಾಬ್‌ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande