ಯುವಕರಲ್ಲಿ ರಾಷ್ಟ್ರ ಮನೋಭಾವ ಬೆಳೆಯ ಬೇಕು : ಅಶ್ವಿನಿ ವೈಷ್ಣವ್
ನವದೆಹಲಿ, 04 ಮಾರ್ಚ್ (ಹಿ.ಸ.) : ಆ್ಯಂಕರ್ : ಭಾರತೀಯ ಸಮೂಹ ಸಂವಹನ ಸಂಸ್ಥೆಯ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ಯುವಕರು ಮೊದಲು ರಾಷ್ಟ್ರದ ಮನೋಭಾವದೊಂದಿಗೆ ಜೀವನದಲ್ಲಿ ಮುನ್ನಡೆಯುವಂತೆ ಸಲಹೆ ನೀಡಿದರು. ಇದು ಅಪರಿಮಿತ ಅವಕಾಶಗಳ ಯ
Convocation


ನವದೆಹಲಿ, 04 ಮಾರ್ಚ್ (ಹಿ.ಸ.) :

ಆ್ಯಂಕರ್ : ಭಾರತೀಯ ಸಮೂಹ ಸಂವಹನ ಸಂಸ್ಥೆಯ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ಯುವಕರು ಮೊದಲು ರಾಷ್ಟ್ರದ ಮನೋಭಾವದೊಂದಿಗೆ ಜೀವನದಲ್ಲಿ ಮುನ್ನಡೆಯುವಂತೆ ಸಲಹೆ ನೀಡಿದರು. ಇದು ಅಪರಿಮಿತ ಅವಕಾಶಗಳ ಯುಗ ಎಂದು ಹೇಳಿದರು. ಪರಿಸ್ಥಿತಿಯಲ್ಲಿ ಬದಲಾಗುತ್ತಿರುವ ಈ ಸಮಯವನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ನಮ್ಮ ಮೇಲೆ ಅವಲಂಬಿತವಾಗಿರುತ್ತದೆ ಎಂದರು.

ಐಐಎಸ್ ಸಿ ಕುಲಪತಿ ಕೇಂದ್ರ ಸಚಿವ ವೈಷ್ಣವ್ ಅವರು, 2023-24ನೇ ಸಾಲಿನ ಶೈಕ್ಷಣಿಕ ಅವಧಿಯ 9 ಕೋರ್ಸ್‌ಗಳ 478 ವಿದ್ಯಾರ್ಥಿಗಳಿಗೆ ಸಂಸ್ಥೆಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ನಡೆದ 56ನೇ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪ್ರದಾನ ಮಾಡಿದರು. ಇದಲ್ಲದೆ, 36 ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಶ್ರೇಷ್ಠತೆಯನ್ನು ಗುರುತಿಸಿ ಪದಕಗಳು ಮತ್ತು ನಗದು ಬಹುಮಾನಗಳನ್ನು ನೀಡಲಾಯಿತು.

ಘಟಿಕೋತ್ಸವದಲ್ಲಿ ಡಿಪ್ಲೊಮಾ ಪಡೆದ ವಿದ್ಯಾರ್ಥಿಗಳ ಜೀವನದಲ್ಲಿ ಇಂದು ಒಂದು ಪ್ರಮುಖ ಮೈಲಿಗಲ್ಲು ಎಂದು ವೈಷ್ಣವ್ ಬಣ್ಣಿಸಿದರು. ಈಗ ನೀವು ಜೀವನದ ಮುಂದಿನ ಹಂತವನ್ನು ಪ್ರವೇಶಿಸುತ್ತೀರಿ ಎಂದು ಅವರು, ಇದೊಂದು ರೋಮಾಂಚಕಾರಿ ಸಮಯ ಎಂದಿದ್ದು, ಮುಂದಿನ ದಿನಗಳಲ್ಲಿ ಬೃಹತ್ ಬದಲಾವಣೆಗಳು ಬರಲಿವೆ ಎಂದು ಹೇಳಿದರು.

ಮೊದಲು ಕೆಲಸದ ಅವಕಾಶ ಸೀಮಿತವಾಗಿತ್ತು ಆದರೆ ಈಗ ಹೊಸ ಅವಕಾಶಗಳು ಬರುತ್ತಿವೆ. ನೀವು ಪ್ರತಿಯೊಬ್ಬರೂ ಇಂದು ಹೊಸ ಉದ್ಯಮವನ್ನು ಪ್ರಾರಂಭಿಸಬಹುದು. ಇಡೀ ಮಾಧ್ಯಮ ಪ್ರಪಂಚ ಬದಲಾಗಿರುವುದರಿಂದ ಇದು ಸಾಧ್ಯವಾಗಿದೆ. ಜೀವನದಲ್ಲಿ ಬರುವ ಬದಲಾವಣೆಗಳನ್ನು ಸ್ವೀಕರಿಸುವಂತೆ ವೈಷ್ಣವ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬದಲಾವಣೆಗಳನ್ನು ಅಳವಡಿಸಿಕೊಂಡವರು ಜೀವನದಲ್ಲಿ ಮುಂದುವರಿಯುತ್ತಾರೆ ಎಂದು ಹೇಳಿದ ಅವರು, ಕೆಲವು ಜನರು ಬದಲಾವಣೆಯಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳುತ್ತಾರೆ ಮತ್ತು ಹಿಂದೆ ಉಳಿಯುತ್ತಾರೆ. ತಮ್ಮನ್ನು ತಾವು ಬದಲಾಯಿಸಿಕೊಂಡು ಮುಂದುವರಿಯುವವರು ಮಾತ್ರ ಭವಿಷ್ಯದಲ್ಲಿ ಯಶಸ್ವಿಯಾಗುತ್ತಾರೆ. ಕಾಲೇಜಿನ ಹೊರಗೆ ನೀವು ಪ್ರಪಂಚದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು. ಇಂತಹ ಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಬೇಕೆಂದು ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ, ಐಐಎಂಸಿ ಉಪಕುಲಪತಿ ಡಾ. ಅನುಪಮಾ ಭಟ್ನಾಗರ್ ಅವರು ಸಂಸ್ಥೆಯ ಪ್ರಗತಿಯ ಬಗ್ಗೆ ವಿವರಿಸಿ, ಸಂಸ್ಥೆಯು ಈಗ ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನವನ್ನು ಪಡೆದಿದೆ ಎಂದು ಹೇಳಿದರು. ಈ ಹೊಸ ಸ್ಥಾನಮಾನದೊಂದಿಗೆ, ಐಐಎಂಸಿ ಈಗ ಡಾಕ್ಟರೇಟ್ ಪದವಿಗಳು ಸೇರಿದಂತೆ ಪದವಿಗಳನ್ನು ನೀಡಲು ಅಧಿಕಾರ ಹೊಂದಿದೆ. ಡೀಮ್ಡ್ ವಿಶ್ವವಿದ್ಯಾಲಯವಾಗಿ ಇದು ನಮ್ಮ ಮೊದಲ ಘಟಿಕೋತ್ಸವ. ಈ ವರ್ಷ ಆಗಸ್ಟ್ 17 ರಂದು, ಸಂಸ್ಥೆಯು ಸ್ಥಾಪನೆಯಾಗಿ 60 ವರ್ಷಗಳನ್ನು ಪೂರೈಸುತ್ತದೆ ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande