ಖಾದಿ ಕುಶಲಕರ್ಮಿಗಳ ವೇತನ ಹೆಚ್ಚಳ
ನವದೆಹಲಿ, 11 ಮಾರ್ಚ್ (ಹಿ.ಸ.) : ಆ್ಯಂಕರ್ : ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಹೋಳಿ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಕುಶಲಕರ್ಮಿಗಳಿಗೆ ಸಂಭಾವನೆ ಹೆಚ್ಚಳದ ಉಡುಗೊರೆಯನ್ನು ನೀಡಿದೆ. ಏಪ್ರಿಲ್ 1, 2025 ರಿಂದ ಅವರ ಸಂಭಾವನೆಯನ್ನು ಶೇಕಡಾ 20 ರಷ್ಟು ಹೆಚ್ಚಿಸಲಾಗುವುದು ಎಂದು ಖಾದಿ ಮತ್ತು ಗ್ರಾಮೋದ್ಯೋಗ
Khadi


ನವದೆಹಲಿ, 11 ಮಾರ್ಚ್ (ಹಿ.ಸ.) :

ಆ್ಯಂಕರ್ : ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಹೋಳಿ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಕುಶಲಕರ್ಮಿಗಳಿಗೆ ಸಂಭಾವನೆ ಹೆಚ್ಚಳದ ಉಡುಗೊರೆಯನ್ನು ನೀಡಿದೆ. ಏಪ್ರಿಲ್ 1, 2025 ರಿಂದ ಅವರ ಸಂಭಾವನೆಯನ್ನು ಶೇಕಡಾ 20 ರಷ್ಟು ಹೆಚ್ಚಿಸಲಾಗುವುದು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಅಧ್ಯಕ್ಷ ಮನೋಜ್ ಕುಮಾರ್ ಮಂಗಳವಾರ ದೆಹಲಿಯ ರಾಜ್‌ಘಾಟ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಸ್ತುತ, ಚರಕದಲ್ಲಿ ನೂಲುವವರಿಗೆ ಪ್ರತಿ ಎಳೆಗೆ ರೂ. 12.50 ಸಿಗುತ್ತಿದ್ದು, ಏಪ್ರಿಲ್ 1 ರಿಂದ ಇದು ರೂ. 2.50 ಹೆಚ್ಚಾಗಲಿದೆ ಎಂದು ಹೇಳಿದರು. ಹೆಚ್ಚಿದ ದರದ ಪ್ರಕಾರ, ಈಗ ಅವರು ಪ್ರತಿ ಎಳೆಗೆ ನೂಲುವುದಕ್ಕೆ 15 ರೂ.ಗಳನ್ನು ಪಡೆಯುತ್ತಾರೆ. ಸರ್ಕಾರವು ನೂಲುವವರು ಮತ್ತು ನೇಕಾರರ ಆದಾಯವನ್ನು ಐತಿಹಾಸಿಕವಾಗಿ ಹೆಚ್ಚಿಸಿದೆ. ಕಳೆದ 11 ವರ್ಷಗಳಲ್ಲಿ ಮೋದಿ ಸರ್ಕಾರ ಖಾದಿ ಕುಶಲಕರ್ಮಿಗಳ ಸಂಭಾವನೆಯನ್ನು ಶೇಕಡಾ 275 ರಷ್ಟು ಹೆಚ್ಚಿಸಿದೆ. ದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾದ ಭಾರತ್ ಟೆಕ್ಸ್ -2025 ರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ಖಾದಿ ಪುನರುಜ್ಜೀವನ'ಕ್ಕಾಗಿ 'ಖಾದಿ ಫಾರ್ ಫ್ಯಾಷನ್' ಎಂಬ ಮಂತ್ರವನ್ನು ನೀಡಿದ್ದಾರೆ ಎಂದು ಹೇಳಿದರು. ಈ ಮಂತ್ರವನ್ನು ಜನಸಾಮಾನ್ಯರಲ್ಲಿ ಹರಡುವ ಮತ್ತು ಖಾದಿಯನ್ನು ಆಧುನಿಕ ಉಡುಗೆಯಾಗಿ ಜನಪ್ರಿಯಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande