ಈಶಾನ್ಯದ ಯುವಕರಿಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗ : ಅಮಿತ್ ಶಾ
ನವದೆಹಲಿ, 11 ಮಾರ್ಚ್ (ಹಿ.ಸ.) : ಆ್ಯಂಕರ್ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂದು ಆಯೋಜಿಸಿದ್ದ ಈಶಾನ್ಯ ವಿದ್ಯಾರ್ಥಿ ಮತ್ತು ಯುವ ಸಂಸತ್ತನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಂದಿನ 10 ವರ್ಷಗಳಲ್ಲಿ ಈಶಾನ್ಯ ರಾಜ್ಯದ ಒಬ್ಬ ಯುವಕನೂ ಉದ್ಯೋಗಕ್ಕಾಗಿ ದೇಶದ ಇತರ ಭಾಗಗಳಿಗೆ ಹೋಗಬ
Amitsha


ನವದೆಹಲಿ, 11 ಮಾರ್ಚ್ (ಹಿ.ಸ.) :

ಆ್ಯಂಕರ್ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂದು ಆಯೋಜಿಸಿದ್ದ ಈಶಾನ್ಯ ವಿದ್ಯಾರ್ಥಿ ಮತ್ತು ಯುವ ಸಂಸತ್ತನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಂದಿನ 10 ವರ್ಷಗಳಲ್ಲಿ ಈಶಾನ್ಯ ರಾಜ್ಯದ ಒಬ್ಬ ಯುವಕನೂ ಉದ್ಯೋಗಕ್ಕಾಗಿ ದೇಶದ ಇತರ ಭಾಗಗಳಿಗೆ ಹೋಗಬೇಕಾಗಿಲ್ಲ ಎಂದು ಹೇಳಿದರು. ಅವರಿಗೆ ಈಶಾನ್ಯ ರಾಜ್ಯಗಳಲ್ಲಿಯೇ ಉದ್ಯೋಗಾವಕಾಶಗಳು ಸಿಗುತ್ತವೆ, ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಹೇಳಿದರು.

ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಭಾಗವಹಿಸುವಿಕೆಯ ಮಹತ್ವದ ಕುರಿತು ಪ್ರಸ್ತಾಪಿಸಿದ ಅವರು , 2047 ರ ವೇಳೆಗೆ ಬಲವಾದ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಈಶಾನ್ಯ ಭಾಗದ ವಿದ್ಯಾರ್ಥಿಗಳು ಕೊಡುಗೆ ನೀಡಬೇಕೆಂದು ಕರೆ ನೀಡಿದರು.

ಕೇಂದ್ರ ಸರಕಾರ ಯುವಜನರ ಸಬಲೀಕರಣ, ಶೈಕ್ಷಣಿಕ ಉಪಕ್ರಮಗಳನ್ನು ಉತ್ತೇಜಿಸುವುದು ಮತ್ತು ಈಶಾನ್ಯದ ಯುವಕರಲ್ಲಿ ಸಮುದಾಯದ ಪ್ರಜ್ಞೆಯನ್ನು ಬೆಳೆಸುವ ಬಗ್ಗೆ ಒತ್ತು ನೀಡಿದ್ದು, ಶಾಂತಿ ಇಲ್ಲದ ರಾಜ್ಯದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ ಮತ್ತು ಮೋದಿ ಸರ್ಕಾರ ಈಶಾನ್ಯದಲ್ಲಿ ಶಾಂತಿಯನ್ನು ತರಲು ಕೆಲಸ ಮಾಡಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಅತಿದೊಡ್ಡ ಸಾಧನೆಯೆಂದರೆ ಅದು ಈಶಾನ್ಯ ಮತ್ತು ಭಾರತದ ಉಳಿದ ಭಾಗಗಳ ನಡುವಿನ ಅಂತರವನ್ನು ಕಡಿಮೆ ಮಾಡಿದೆ. 2027 ರ ವೇಳೆಗೆ, ಈಶಾನ್ಯದ ಪ್ರತಿಯೊಂದು ರಾಜಧಾನಿಯೂ ರೈಲು, ವಿಮಾನ ಮತ್ತು ರಸ್ತೆಯ ಮೂಲಕ ಸಂಪರ್ಕ ಹೊಂದಲಿವೆ ಎಂದರು. ಮುಂದಿನ 10 ವರ್ಷಗಳಲ್ಲಿ, ಈಶಾನ್ಯ ಭಾಗದ ಯುವಕರು ದೇಶದ ಇತರ ಭಾಗಗಳಿಗೆ ಕೆಲಸಕ್ಕಾಗಿ ಹೋಗಬೇಕಾಗಿಲ್ಲ. ನಿಮಗೆ ಈಶಾನ್ಯದಲ್ಲಿ ಉದ್ಯೋಗ ಸಿಗುತ್ತದೆ. ಈಶಾನ್ಯ ರಾಜ್ಯಗಳು ಭಾರತೀಯ ಸಂಸ್ಕೃತಿಯ ಅಮೂಲ್ಯ ರತ್ನ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande