ರಾಜಕೀಯ ಪಕ್ಷಗಳಿಂದ ಸಲಹೆ ಕೋರಿದ ಚುನಾವಣಾ ಆಯೋಗ
ನವದೆಹಲಿ, 11 ಮಾರ್ಚ್ (ಹಿ.ಸ.) : ಆ್ಯಂಕರ್ : ಇಆರ್‌ಒ, ಡಿಇಒ ಅಥವಾ ಸಿಇಒ ಮಟ್ಟದಲ್ಲಿ ಬಗೆಹರಿಯದ ಯಾವುದೇ ಸಮಸ್ಯೆಗಳಿಗೆ ಏಪ್ರಿಲ್ 30 ರೊಳಗೆ ಚುನಾವಣಾ ಆಯೋಗವು ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಿಂದ ಸಲಹೆಗಳನ್ನು ಆಹ್ವಾನಿಸಿದೆ. ಆಯೋಗವು ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿದ್ದು, ರಾಜಕ
EC


ನವದೆಹಲಿ, 11 ಮಾರ್ಚ್ (ಹಿ.ಸ.) :

ಆ್ಯಂಕರ್ : ಇಆರ್‌ಒ, ಡಿಇಒ ಅಥವಾ ಸಿಇಒ ಮಟ್ಟದಲ್ಲಿ ಬಗೆಹರಿಯದ ಯಾವುದೇ ಸಮಸ್ಯೆಗಳಿಗೆ ಏಪ್ರಿಲ್ 30 ರೊಳಗೆ ಚುನಾವಣಾ ಆಯೋಗವು ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಿಂದ ಸಲಹೆಗಳನ್ನು ಆಹ್ವಾನಿಸಿದೆ.

ಆಯೋಗವು ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿದ್ದು, ರಾಜಕೀಯ ಪಕ್ಷಗಳಿಗೆ ವೈಯಕ್ತಿಕ ಪತ್ರಗಳನ್ನು ರವಾನಿಸಿದೆ.

ಸ್ಥಾಪಿತ ಕಾನೂನಿನ ಪ್ರಕಾರ ಚುನಾವಣಾ ಪ್ರಕ್ರಿಯೆಗಳನ್ನು ಮತ್ತಷ್ಟು ಬಲಪಡಿಸಲು ಪರಸ್ಪರ ಅನುಕೂಲಕರ ಸಮಯದಲ್ಲಿ ಪಕ್ಷದ ಅಧ್ಯಕ್ಷರು ಮತ್ತು ಪಕ್ಷದ ಹಿರಿಯ ಸದಸ್ಯರೊಂದಿಗೆ ಚರ್ಚೆ ನಡೆಸುವಂತೆ ಆಯೋಗವು ಸೂಚಿಸಿದೆ.

ಕಳೆದ ವಾರ ನಡೆದ ಸಮ್ಮೇಳನದಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಿಇಒಗಳು, ಡಿಒಒಗಳು ಮತ್ತು ಇಆರ್‌ಒಗಳು ರಾಜಕೀಯ ಪಕ್ಷಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸುವಂತೆ ನಿರ್ದೇಶಿಸಿದ್ದರು.

ಅಲ್ಲದೆ, ಅಂತಹ ಸಭೆಗಳಲ್ಲಿ ಸ್ವೀಕರಿಸಿದ ಸಲಹೆಗಳನ್ನು ಪರಿಹರಿಸಲು ಮಾರ್ಚ್ 31 ರೊಳಗೆ ಕ್ರಿಯಾ ವರದಿಯನ್ನು ಸಲ್ಲಿಸಲು ಸೂಚಿಸಲಾಗಿತ್ತು. ಸಂವಿಧಾನ ಮತ್ತು ಶಾಸನಬದ್ಧ ಚೌಕಟ್ಟಿನ ಪ್ರಕಾರ ಆಯೋಗವು ಗುರುತಿಸಿರುವ 28 ಪಾಲುದಾರರಲ್ಲಿ ರಾಜಕೀಯ ಪಕ್ಷಗಳು ಪ್ರಮುಖ ಪಾಲುದಾರರಲ್ಲಿ ಒಂದಾಗಿವೆ. ಸುಪ್ರೀಂ ಕೋರ್ಟ್‌ನ ಕಾನೂನು ನಿಬಂಧನೆಗಳು ಮತ್ತು ನಿರ್ದೇಶನಗಳ ಅಡಿಯಲ್ಲಿ ಚುನಾವಣಾ ಆಯೋಗವು ಈ ಕಾರ್ಯ ಕೈಗೊಂಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande