ನವದೆಹಲಿ, 10 ಮಾರ್ಚ್ (ಹಿ.ಸ.) :
ಆ್ಯಂಕರ್ :ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಭಾಗ ಇಂದಿನಿಂದ ಆರಂಭವಾಗಲಿದೆ.
ಈ ಅಧಿವೇಶನ ಏಪ್ರಿಲ್ ೪ರವರೆಗೆ ನಿಗದಿಯಾಗಿದೆ. ಪ್ರಸ್ತುತ ರಾಷ್ಟ್ರಪತಿ ಆಳ್ವಿಕೆಯಿರುವ ಮಣಿಪುರದ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಇಂದು ಮಂಡಿಸಲಿದ್ದಾರೆ.
ಈ ಅಧಿವೇಶನದಲ್ಲಿ ೨೦೨೫-೨೬ನೇ ಸಾಲಿನ ಅನುದಾನ ಬೇಡಿಕೆಗಳು ಮತ್ತು ಸಂಬಂಧಿತ ವಿನಿಯೋಗ ಚರ್ಚೆ ಮತ್ತು ಅನುದಾನ ನಡೆಯಲಿದೆ.ಇದಲ್ಲದೆ, ಬ್ಯಾಂಕಿಂಗ್ ಕಾನೂನುಗಳು ತಿದ್ದುಪಡಿ ವಿಧೇಯಕ, ಕರಾವಳಿ ಸಾಗಣೆ ವಿಧೇಯಕ ೨೦೨೪, ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯದ ವಿಧೇಯಕ, ವಲಸೆ ಮತ್ತು ವಿದೇಶಿಯರ ವಿಧೇಯಕ ೨೦೨೫ ಮತ್ತು ರೈಲ್ವೆ ತಿದ್ದುಪಡಿ ವಿಧೇಯಕ ಸೇರಿದಂತೆ ಹಲವಾರು ಮಸೂದೆಗಳ ಮೇಲೆ ಚರ್ಚೆ ಸಾಧ್ಯತೆಯಿದೆ.
---------------
ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV