ಮಣಿಪುರದಲ್ಲಿ 10 ಉಗ್ರರ ಬಂಧನ
ಇಂಫಾಲ್, 10 ಮಾರ್ಚ್ (ಹಿ.ಸ.) : ಆ್ಯಂಕರ್ : ಮಣಿಪುರ ಪೋಲಿಸರು ವಿವಿಧ ಉಗ್ರಗಾಮಿ ಸಂಘಟನೆಯ 10 ಕಾರ್ಯಕರ್ತರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಬಂಧಿಸಿದ್ದಾರೆ. ಪೊರೊಂಗ್‌ಪತ್ ಪೊಲೀಸ್ ಠಾಣೆ ವ್ಯಾಪ್ತಿಯ ಗೋಲಪಟ್ಟಿ ಮಸೀದಿ ಬಳಿ ಸೋನಿಯಾ ದೇವಿ (24) ಬಂಧಿಸಿದ್ದು ಅವಳಿಂದ ₹1,07,260 ಮತ್ತು ಮೊಬೈಲ್ ಫೋನ್ ವ
Arrest


ಇಂಫಾಲ್, 10 ಮಾರ್ಚ್ (ಹಿ.ಸ.) :

ಆ್ಯಂಕರ್ : ಮಣಿಪುರ ಪೋಲಿಸರು ವಿವಿಧ ಉಗ್ರಗಾಮಿ ಸಂಘಟನೆಯ 10 ಕಾರ್ಯಕರ್ತರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಬಂಧಿಸಿದ್ದಾರೆ.

ಪೊರೊಂಗ್‌ಪತ್ ಪೊಲೀಸ್ ಠಾಣೆ ವ್ಯಾಪ್ತಿಯ ಗೋಲಪಟ್ಟಿ ಮಸೀದಿ ಬಳಿ ಸೋನಿಯಾ ದೇವಿ (24) ಬಂಧಿಸಿದ್ದು ಅವಳಿಂದ ₹1,07,260 ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಇನ್ನೊಂದು ಕಾರ್ಯಾಚರಣೆಯಲ್ಲಿ, ಚಿರೋಮ್ ರೋಸ್ತಮ್ (25) ಮತ್ತು ಹೈಕ್ರುಜಮ್ ಅರವಿಂದ್ ಸಿಂಗ್ (32) ಖೊಂಗ್ಮನ್ ನಂದಿಬಮ್ ಲೈಕೈನಿಂದ ಬಂಧಿಸಲಾಗಿದ್ದು, ಅವರಿಂದ ಎರಡು ಮೊಬೈಲ್ ಫೋನ್‌ಗಳು ವಶಪಡಿಸಿಕೊಳ್ಳಲಾಗಿದೆ.

ಮೂರನೇ ಕಾರ್ಯಾಚರಣೆಯಲ್ಲಿ, ಬೋಯಿಶೆಂಬಾ (28), ಲುತುಂಬಾ (25) ಮತ್ತು ಯುಮ್ನಮ್ ಚಾನು ಬಂಧಿಸಿದ್ದು,ಅವರಿಂದ ಮೂರು ಮೊಬೈಲ್ ಫೋನ್‌ಗಳು ವಶಪಡಿಸಿಕೊಳ್ಳಲಾಗಿದೆ.

ಆರನೇ ಕಾರ್ಯಾಚರಣೆಯಲ್ಲಿ, ಕೆಸಿಪಿ (ಪಿಡಬ್ಲ್ಯೂಜಿ) ಸದಸ್ಯ ಇನಾಯೋತನ್ ಸಿಂಗ್ (38) ಹಾಗೂ ಶಂಧಮ್ ರೋಮನ್ ಸಿಂಗ್ (39) ಬಂಧಿಸಲಾಗಿದಗದು. ಶಂಧಮ್‌ನಿಂದ 11 ಬೆದರಿಕೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಾರ್ವಜನಿಕರಿಗೆ ಬೆದರಿಸಿ ಸುಲಿಗೆ ಮಾಡುತ್ತಿದ್ದ 3 ಯುಪಿಪಿಕೆ ಸದಸ್ಯರನ್ನು ಲ್ಯಾಂಗೋಲ್ ನಲ್ಲಿ ಬಂಧಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande