ನಿತ್ಯ ಜಂಜಡದ ಒತ್ತಡದ ಜೀವನಕ್ಕೆ ಹಾಸ್ಯ ಸರಿಯಾದ ಮದ್ದು : ಪರಣ್ಣ ಮುನವಳ್ಳಿ
ಗಂಗಾವತಿ, 09 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಒತ್ತಡದ ಬದುಕಿನ ಕಾರಣ ಅನೇಕರು ಬಿಪಿ ಶುಗರ್ ಸೇರಿ ಇನ್ನಿತರೆ ಆರೋಗ್ಯ ಸಮಸ್ಯೆಗಳಿಂದ ನರಳುವಂತಾಗಿದೆ. ಕಾರಣ ಹಾಸ್ಯವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ನಕ್ಕು - ನಲಿದು ಆರೋಗ್ಯವನ್ನು ಸುಧಾರಿಸಿಕೊಳ್ಳೋಣ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರ
ನಿತ್ಯ ಜಂಜಡದ ಒತ್ತಡದ ಜೀವನಕ್ಕೆ ಹಾಸ್ಯ ಸರಿಯಾದ ಮದ್ದು: ಪರಣ್ಣ ಮುನವಳ್ಳಿ


ಗಂಗಾವತಿ, 09 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಒತ್ತಡದ ಬದುಕಿನ ಕಾರಣ ಅನೇಕರು ಬಿಪಿ ಶುಗರ್ ಸೇರಿ ಇನ್ನಿತರೆ ಆರೋಗ್ಯ ಸಮಸ್ಯೆಗಳಿಂದ ನರಳುವಂತಾಗಿದೆ. ಕಾರಣ ಹಾಸ್ಯವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ನಕ್ಕು - ನಲಿದು ಆರೋಗ್ಯವನ್ನು ಸುಧಾರಿಸಿಕೊಳ್ಳೋಣ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ತಿಳಿಸಿದ್ದಾರೆ.

ಪಬ್ಲಿಕ್ ಕ್ಲಬ್ ರಂಗಮಂದಿರದಲ್ಲಿ ಹಾಸ್ಯಲೋಕ ಸಂಘಟನೆ 17ನೇ ಹಾಸ್ಯೋತ್ಸವ ಮತ್ತು ನಗೆ ಮಾದರ್ಯ ಹಾಗು ಕರೋಕೆ ರಸಸಂಜೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಂಗಾವತಿಗೆ ಅನೇಕ ಹಾಸ್ಯ ಭಾಷಣಕಾರರನ್ನು ಪರಿಚಯಿಸಿದ ಕೀರ್ತಿ ಹಾಸ್ಯಲೋಕ ಸಂಘಟನೆಗೆ ಸಲ್ಲುತ್ತಿದ್ದು, ಅಧ್ಯಕ್ಷ ಎಸ್‍ಎಂ ಪಟೇಲ್ ಹಾಗು ಪ್ರಧಾನ ಕಾರ್ಯದರ್ಶಿ ಪರಶುರಾಮ್ ಪ್ರಿಯಾ ಅವರ ಕಾರ್ಯ ಮೆಚ್ಚುವಂಥದ್ದು, ಪ್ರತಿಫಲಪೇಕ್ಷೆ ಇಲ್ಲದೆ ನಿರಂತರ ಸಾಂಸ್ಕøತಿಕ ರಾಯಬಾರಿಗಳಂತೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಅರಳಹಳ್ಳಿಯ ಶ್ರೀ ರೇವಣಸಿದ್ದಯ್ಯತಾತಾ ಅವರು ಮಾತನಾಡಿ, ರಂಗಭೂಮಿ, ಸಂಗೀತ, ನಾಟ್ಯ, ಸಾಹಿತ್ಯ ಹಾಗು ಹಾಸ್ಯಗೋಷ್ಟಿಗಳಿಗೆ ಹಿಂದಿನ ದಿನಗಳಲ್ಲಿ ರಾಜರು ಆಶ್ರಯ ನೀಡಿ ಪ್ರೋತ್ಸಾಹಿಸುತ್ತಿದ್ದರು, ಆದರೆ ಇಂದು ಪ್ರಜೆಗಳೇ ಪ್ರಭುಗಳಾಗಿರುವುದರಿಂದ ತನುಮನಧನ ನೀಡಿ ಸಹಕರಿಸುವ ಅಗತ್ಯವಿದೆ ಎಂದರು.

ಕಾವ್ಯಲೋಕ ಸಂಘಟನೆಯ ಅಧ್ಯಕ್ಷ ಎಸ್.ಎಂ.ಪಟೇಲ್ ಮಾತನಾಡಿ, ಹದಿನೇಳು ವರ್ಷದ ಕಾರ್ಯಕ್ರಮ ಆಯೋಜನೆಯಲ್ಲಿ ಅನೇಕ ಏಳುಬೀಳುಗಳನ್ನು ಕಂಡಿದ್ದೇವೆ, ಅವಮಾನಗಳನ್ನು ಮೆಟ್ಟಿನಿಂತಿದ್ದೇವೆ, ನಗಿಸುವ ಮೂಲಕ ಜನರ ಮನಸ್ಸು ಉಲ್ಲಾಸಗೊಳಿಸುವ ಉತ್ತಮ ಕಾರ್ಯ ಇದಾಗಿದ್ದು, ಕಲಾವಿದರಿಗು ಪ್ರೋತ್ಸಾಹ ನೀಡುವ ಉದ್ದೇಶದಿಂದ ಎಲ್ಲವನ್ನು ಸಹಿಸಿಕೊಂಡು ಮುಂದೆ ನುಗ್ಗುವ ಪ್ರತಿಜ್ಞೆ ಮಾಡಿದ್ದೇವೆ ನಮ್ಮ ಕಾರ್ಯಕ್ಕೆ ಸದಾ ಬೆಂಬಲಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸುವರ್ಣಗಿರಿ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು, ನಗೆ ಕ್ಯಾಲೆಂಡ್ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ಹಾಸ್ಯ ಚಕ್ರವರ್ತಿ ಬೇವಿನಾಳ್ ಪ್ರಾಣೇಶ್, ಬಿಜೆಪಿ ಕೊಪ್ಪಳ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ್ ವಿರುಪಾಕ್ಷಪ್ಪ, ಕಾಡಾ ಮಾಜಿ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ, ಹಿರಿಯ ನ್ಯಾಯವಾದಿ ಮಹಾಬಳೇಶ್ವರ ಹಾಸಿನಾಳ್, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಶಿವುಕುಮಾರ್ ಮಾಲಿಪಾಟೀಲ್, ಹಿರಿಯ ಪತ್ರಕರ್ತರಾದ ರಾಮಮೂರ್ತಿ ನವಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಅಧ್ಯಕ್ಷ ನಾಗರಾಜ್ ಇಂಗಳಗಿ, ಕೊಪ್ಪಳ ಜಿಲ್ಲಾ ಸಂಪಾದಕರ ಸಂಘದ ಅಧ್ಯಕ್ಷ ಎಂ.ಜೆ.ಶ್ರೀನಿವಾಸ್, ಕರ್ನಾಟಕ ಮಾದ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ, ಕಾವ್ಯಲೋಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಪ್ರಿಯ, ಕರುಣಾ ರೂರಲ್ ಡೆವಲಪ್‍ಮೆಂಟ್ ಅಧ್ಯಕ್ಷೆ ಸಿ.ಮಹಾಲಕ್ಷ್ಮಿ, ಚಲನಚಿತ್ರ ನಟ ವಿಷ್ಣುತೀರ್ಥ ಜೋಷಿ, ರೋಟರಿ ಕ್ಲಬ್ ಅಧ್ಯಕ್ಷ ಪಿ.ಅಂಜನೇಯ್ಯ, ವಕೀಲರ ಸಂಘದ ಅಧ್ಯಕ್ಷ ಶರಣ ಬಸಪ್ಪ ನಾಯಕ ನಗರಸಭಾ ಸದಸ್ಯರಾದ ಸುನಿತಾ ಶ್ಯಾವಿ, ವಾಸುದೇವ ನವಲಿ, ಹಿರಿಯ ನ್ಯಾಯವಾದಿ ಪಟ್ಟಣಶೆಟ್ಟಿ, ಹಾಸ್ಯಕಲಾವಿದರಾದ ಇಂದುಮತಿ, ಬಸವರಾಜ್ ಬೆಣ್ಣೆ ಚಿದಾನಂದ ಕೀರ್ತಿ, ಜೂನಿಯರ್ ವಿಷ್ಣುವರ್ಧನ್ ಇತರರಿದ್ದರು. ಹಾಸ್ಯಕಲಾವಿದರ ತಮ್ಮ ಹಾಸ್ಯದ ಮೂಲಕ ಜನಮನ ರಂಜಿಸಿದರು.

ಸಾಧನೆ ಗೈದ ಪಟ್ಟನಶೆಟ್ಟಿ ವಕೀಲರು, ಸಿ.ಮಹಾಲಕ್ಷ್ಮಿ ಹಾಗು ಮಂಜುನಾಥ ಹೊಸಗೇರಾ ಇವರನ್ನು ಈ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande