ಸರ್ವರಿಗೂ ವೃಕ್ಷ ಅಭಿಯಾನ ಸಮಿತಿ ಕೃತಜ್ಞತೆ
ವಿಜಯಪುರ, 09 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವೃಕ್ಷಥಾನ್ ಹೆರಿಟೇಜ್ ರನ್-2025 ನೀರಿಕ್ಷೆಗೂ ಮೀರಿ ಯಶಸ್ವಿಯಾಗಲು ಸಹಕರಿಸಿದ ಸರ್ವರಿಗೂ ವೃಕ್ಷ ಅಭಿಯಾನ ಸಮಿತಿ ಕೃತಜ್ಞತೆ ಸಲ್ಲಿಸಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡೀರುವ ಸಮಿತಿ ಸಂಚಾಲಕ ಡಾ.ಮುರುಗೇಶ ಪಟ್ಟಣಶೆಟ್ಟಿ ಈ ಬಾರಿ ಓಟದಲ್ಲಿ 21 ಸಾವಿರಕ
ಸರ್ವರಿಗೂ ವೃಕ್ಷ ಅಭಿಯಾನ ಸಮಿತಿ ಕೃತಜ್ಞತೆ


ವಿಜಯಪುರ, 09 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವೃಕ್ಷಥಾನ್ ಹೆರಿಟೇಜ್ ರನ್-2025 ನೀರಿಕ್ಷೆಗೂ ಮೀರಿ ಯಶಸ್ವಿಯಾಗಲು ಸಹಕರಿಸಿದ ಸರ್ವರಿಗೂ ವೃಕ್ಷ ಅಭಿಯಾನ ಸಮಿತಿ ಕೃತಜ್ಞತೆ ಸಲ್ಲಿಸಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡೀರುವ ಸಮಿತಿ ಸಂಚಾಲಕ ಡಾ.ಮುರುಗೇಶ ಪಟ್ಟಣಶೆಟ್ಟಿ ಈ ಬಾರಿ ಓಟದಲ್ಲಿ 21 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿರುವುದು ವಿಜಯಪುರದ ಜನತೆಯ ಪರಿಸರದ ಬಗ್ಗೆ ಇರುವ ಕಾಳಜಿ ತೋರಿದೆ. ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಗಳಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಈ ಯಶಸ್ಸಿಗೆ ಪ್ರಾಯೋಜಕರು, ದೇಣಿಗೆ ನೀಡಿದ ಗಣ್ಯರು, ವೃಕ್ಷಥಾನ್ ರನ್ ಗೆ ಶ್ರಮಿಸಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಪ್ರವಾಸೋದ್ಯಮ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಬಿ.ಎಲ್.ಡಿ.ಇ ಸಂಸ್ಥೆ, ಸೈನಿಕ ಶಾಲೆ, ಸೊಸೈಟಿ ಫಾರ್ ಪ್ರೊಟೇಕ್ಷನ್ ಆಫ್ ಪ್ಲ್ಯಾಂಟ್ಸ್ ಆಂಡ್ ಅನಿಮಲ್ಸ್ ಮತ್ತು ವಿಜಯಪುರ ಸೈಕ್ಲಿಂಗ್ ಗ್ರುಪ್ ಹಾಗೂ ವೃಕ್ಷಥಾನ್ ಕೋರ್ ಕಮಿಟಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದೇ ವೇಳೆ ವೃಕ್ಷಥಾನ್ ಹೆರಿಟೇಜ್ ರನ್ ಬಗ್ಗೆ ಸಾಕಷ್ಟು ಪ್ರಚಾರ ನೀಡಿದ ಮಾಧ್ಯಮ ಪ್ರತಿನಿಧಿಗಳ ಕಾರ್ಯ ಶ್ಲಾಘನೀಯವಾಗಿದೆ. ಓಟದಲ್ಲಿ ಪಾಲ್ಗೊಂಡ ವಿಜಯಪುರ, ರಾಜ್ಯ ಮತ್ತು ದೇಶದ ನಾನಾ ಭಾಗಗಳಿಂದ ಆಗಮಿಸಿದ ಓಟಗಾರರು ಇದರ ಯಶಸ್ಸಿಗೆ ಕಾರಣರಾಗಿದ್ದಾರೆ.

ಈ ಬಾರಿಯ ಯಶಸ್ಸು ಮುಂದಿನ ಕಾರ್ಯಕ್ರಮಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಿದೆ ಎಂದು ಡಾ.ಪಟ್ಟಣಶೆಟ್ಟಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande