
ರಾಯಚೂರು, 09 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ ಇಲಾಖೆ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಕೇಂದ್ರ ಬೆಂಗಳೂರಿನ ನೈಋತ್ಯ ಪ್ರದೇಶದ ಅಂತರ್ಜಲ ಮಂಡಳಿಯಿಂದ ಜಲಚರ ನಕ್ಷೆ, ಅಂತರ್ಜಲ-ಸಂಬಂಧಿತ ಸಮಸ್ಯೆಗಳು ಮತ್ತು ಅಂತರ್ಜಲ ನಿರ್ವಹಣೆ ಕುರಿತು 3ನೇ ಶ್ರೇಣಿ ತರಬೇತಿ ಕಾರ್ಯಕ್ರಮವನ್ನು ನಗರದ ಕೃಷಿ ಎಂಜಿನಿಯರಿಂಗ್ ಕಾಲೇಜಿನ ಸಿಲ್ವರ್ ಜುಬಿಲಿ ಸೆಮಿನಾರ್ ಹಾಲ್‍ನಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಸಿಜಿಡ್ಲೂಬಿ, ಎಸ್.ಡ್ಲೂಆರ್ ಪ್ರಾದೇಶಿಕ ನಿರ್ದೇಶಕರಾದ ಜಿ.ಕೃಷ್ಣಮೂರ್ತಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಯುಎಎಸ್ ಉಪಕುಲಪತಿಗಳಾದ ಡಾ.ಹನುಮಂತಪ್ಪ, ಕಾಲೇಜ್ ಆಫ್ ಅಗ್ರಿಕಲ್ಚರಲ್ ಇಂಜಿನಿಯರಿಂಗ್ ಡೀನ್ ಡಾ.ಎಂ.ಎಸ್.ಅಯ್ಯನಗೌಡರು, ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿಸ್ತರಣೆ ನಿರ್ದೇಶಕರಾದ ಎ.ಆರ್.ಕುರುಬರ್ ಅವರು ಉಪಸ್ಥಿತರಿರುವರು ಎಂದು ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್