ದೂರದರ್ಶನದ ‘ಸುಪ್ರಭಾತ’ ಕಾರ್ಯಕ್ರಮ ಭಾರತೀಯ ಸಂಸ್ಕೃತಿಯ ಸಂಗಮ : ಪ್ರಧಾನಿ ಮೋದಿ
ನವದೆಹಲಿ, 09 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದೂರದರ್ಶನದಲ್ಲಿ ಪ್ರಸಾರವಾಗುವ “ಸುಪ್ರಭಾತ” ಕಾರ್ಯಕ್ರಮವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯ ಸಮಗ್ರ ಸಂಗಮ ಎಂದು ಕೊಂಡಾಡಿದ್ದಾರೆ. ಮಂಗಳವಾರ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಸಂದೇಶದಲ್ಲಿ, ಪ್ರಧಾನಿಯ
Pm


ನವದೆಹಲಿ, 09 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದೂರದರ್ಶನದಲ್ಲಿ ಪ್ರಸಾರವಾಗುವ “ಸುಪ್ರಭಾತ” ಕಾರ್ಯಕ್ರಮವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯ ಸಮಗ್ರ ಸಂಗಮ ಎಂದು ಕೊಂಡಾಡಿದ್ದಾರೆ. ಮಂಗಳವಾರ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಸಂದೇಶದಲ್ಲಿ, ಪ್ರಧಾನಿಯವರು ಕಾರ್ಯಕ್ರಮದಲ್ಲಿ ಪ್ರತಿದಿನ ಪ್ರಸಾರವಾಗುವ ಸಂಸ್ಕೃತ ವಚನಗಳು ದೇಶದ ಸಾಂಸ್ಕೃತಿಕ ನಿರಂತರತೆಯನ್ನು ಸುಂದರವಾಗಿ ಪ್ರತಿಬಿಂಬಿಸುತ್ತವೆ ಎಂದು ಪ್ರಶಂಸಿಸಿದ್ದಾರೆ.

ಪ್ರಧಾನಿ ಮೋದಿ ತಮ್ಮ ಸಂದೇಶವನ್ನು ಸಂಸ್ಕೃತದಲ್ಲಿ ಬರೆಯುವ ಮೂಲಕ, ಕಾರ್ಯಕ್ರಮವು ಮೌಲ್ಯಗಳು, ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಮಹತ್ವವನ್ನು ಜನರಿಗೆ ತಲುಪಿಸುವಲ್ಲಿ ಮಹತ್ತ್ವದ ಪಾತ್ರ ವಹಿಸುತ್ತಿದೆ, ಜೀವನದ ವಿವಿಧ ಅಂಶಗಳನ್ನು ಸಾರುವ ದೈನಂದಿನ ಗಾದೆಗಳು ಮತ್ತು ಪದ್ಯಗಳು ಕಾರ್ಯಕ್ರಮದ ಮೂಲಕ ಜನರಿಗೆ ಸ್ಫೂರ್ತಿ ನೀಡುತ್ತಿವೆ ಎಂದು ಅವರು ಹೇಳಿದರು.

“ಸುಪ್ರಭಾತದಲ್ಲಿ ಪ್ರಸಾರವಾಗುವ ವಚನಗಳು ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಹೊಸ ಪೀಳಿಗೆಗೆ ಪರಿಚಯಿಸುತ್ತಿವೆ. ಭಾರತೀಯ ಭಾಷೆಗಳಲ್ಲಿರುವ ಜ್ಞಾನ ಮತ್ತು ಚಿಂತನೆಗಳು ಇಂದಿಗೂ ನಮ್ಮ ಸಮಾಜಕ್ಕೆ ದಾರಿದೀಪವಾಗಿವೆ,” ಎಂದು ಪ್ರಧಾನಿ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande