ಬಳ್ಳಾರಿ : ಕೃಷಿ ಪರಿಕರ ಮಾರಾಟ - ಕೃಷಿ ವಿಚಕ್ಷಣಾ ದಳ ಭೇಟಿ
ಬಳ್ಳಾರಿ, 09 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯ ಕೃಷಿ ವಿಚಕ್ಷಣಾದಳ, ಕಲಬುರಗಿ ವಿಭಾಗದ ಜಂಟಿ ಕೃಷಿ ನಿರ್ದೇಶಕರ ನೇತೃತ್ವದ ತಂಡವು ಜಿಲ್ಲೆಯಲ್ಲಿ ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆ ಹಾಗೂ ಸಿ ಅಂಡ್ ಎಫ್ ಗೋದಾಮುಗಳ ಮೇಲೆ ದಾಳಿ ನಡೆಸಿ ನಿಯಮಬಾಹಿರವಾಗಿ ರಸಗೊಬ್ಬರ - ಪೀಡೆನಾಶಕ ಮಾರಾಟ ಮಾಡಿದ ಮ
ಬಳ್ಳಾರಿ : ಕೃಷಿ ಪರಿಕರ ಮಾರಾಟ - ಕೃಷಿ ವಿಚಕ್ಷಣಾ ದಳ ಭೇಟಿ


ಬಳ್ಳಾರಿ, 09 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯ ಕೃಷಿ ವಿಚಕ್ಷಣಾದಳ, ಕಲಬುರಗಿ ವಿಭಾಗದ ಜಂಟಿ ಕೃಷಿ ನಿರ್ದೇಶಕರ ನೇತೃತ್ವದ ತಂಡವು ಜಿಲ್ಲೆಯಲ್ಲಿ ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆ ಹಾಗೂ ಸಿ ಅಂಡ್ ಎಫ್ ಗೋದಾಮುಗಳ ಮೇಲೆ ದಾಳಿ ನಡೆಸಿ ನಿಯಮಬಾಹಿರವಾಗಿ ರಸಗೊಬ್ಬರ - ಪೀಡೆನಾಶಕ ಮಾರಾಟ ಮಾಡಿದ ಮಳಿಗೆ ಮತ್ತು ಗೋದಾಮುಗಳಿಗೆ ನೋಟಿಸ್ ಜಾರಿ ಮಾಡಿದೆ.

ರಾಜ್ಯ ಕೃಷಿ ವಿಚಕ್ಷಣಾ ದಳ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಶಿವಕುಮಾರ್ ಅವರು, ವಿವಿಧ ಸಂಸ್ಥೆಗಳ ಬಯೋಸ್ಟಿಮ್ಯುಲಂಟ್ - ಜೈವಿಕ ಗೊಬ್ಬರಗಳನ್ನು ನಿಯಮಬಾಹಿರವಾಗಿ ಮಾರಾಟ ಮಾಡುತ್ತಿದ್ದ ರಸಗೊಬ್ಬರ - ಪೀಡೆನಾಶಕಗಳ ಪರಿಕರಗಳಾದ ಸ್ಟೇನ್ಸ್‍ಗ್ರೀನ್ ಮಿರಾಕಲ್, ಅಗ್ಫೋರ್ಟ್, ಬ್ರಾಸ್ಸೋಫಿಟ್, ಜಾಂಥೋನಿಲ್, ವಿವಾ, ಎಂಸಿಸೆಟ್, ಸೂಪರ್ 8, ರೈಸ್, ಆಸ್ಕೋಮ್ಯಾಕ್ಸ್, ಬಯೋವಿಟಾ, ಫ್ಯೂಜಿಕೋ-ಎಫ್‍ಎಸ್, ಐಸಾಬಿಯಾ£ ಸೇರಿ ಒಟ್ಟು 12 ಮಾದರಿಗಳನ್ನು ನಿಯಮಾನುಸಾರ ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವಿಶ್ಲೇಷಣಾ ವರದಿ ಬಂದ ನಂತರ ಯಾವುದಾದರೂ ನಿಯಮಬಾಹಿರ ವಸ್ತುಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಸಂಸ್ಥೆ ಮತ್ತು ಮಾರಾಟ ಮಳಿಗೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಹಿಂದೆ ಅಪರ ಕೃಷಿ ನಿರ್ದೇಶಕರು, ರಾಜ್ಯ ಕೃಷಿ ವಿಚಕ್ಷಣಾದಳ, ಬೆಂಗಳೂರು ಇವರ ನೇತೃತ್ವದಲ್ಲಿ ತಂಡವು ವಿವಿಧ ಸಿ,ಎಫ್ ಗೋದಾಮುಗಳ ಮೇಲೆ ಇತ್ತೀಚೆಗೆ ಅನಿರೀಕ್ಷಿತ ದಾಳಿ ನಡೆಸಿ ಮೆಸ್ಸರ್ಸ್ ಘರ್ಡಾ ಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆಯ ಡೈಮಿಥೋಯೇಟ್ 30% ಇಸಿ 800 ಲೀ. ಸುಮಾರು ರೂ.10.02 ಲಕ್ಷ, ಬಿಹೆಚ್‍ಎಲ್ ರಸಾಯನ್ ಉದ್ಯೋಗ್ ಪ್ರೈ.ಲಿ. ಸಂಸ್ಥೆಯ ಕ್ಲೋರ್‍ಪೈರಿಫಾಸ್ 10 ಗ್ರಾಂ., 1060 ಕೆಜಿ ಸುಮಾರು ರೂ.4.04 ಲಕ್ಷ ಮತ್ತು ಜು ಅಗ್ರಿ ಕ್ರಾಪ್ ಸೈನ್ಸ್ ಲಿಮಿಟೆಡ್ ಸಂಸ್ಥೆಯ ಇಸಿ 1620 ಲೀ. ಸುಮಾರು ರೂ.8.90 ಲಕ್ಷ ಮೌಲ್ಯದ ಕೀಟನಾಶಕಗಳ ಸೇರಿದಂತೆ ಒಟ್ಟು ರೂ.23.15 ಲಕ್ಷ ಮೌಲ್ಯದ ಕೀಟನಾಶಕಗಳನ್ನು ಕಾನೂನು ಬಾಹಿರವಾಗಿ ದಾಸ್ತಾನು ಮತ್ತು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಕೀಟನಾಶಕಗಳನ್ನು ಜಪ್ತಿ ಮಾಡಿ ಘನ ನ್ಯಾಯಾಲಯದಲ್ಲಿ ಸಂಬಂಧಪಟ್ಟ ಸಂಸ್ಥೆ ಮತ್ತು ಮಾರಾಟ ಮಳಿಗೆಗಳ ವಿರುದ್ಧ ಮೊಕದ್ದಮೆ ಹೂಡಲಾಗಿದೆ ಎಂದು ಅವರು ಹೇಳಿದ್ದಾರೆ.

ದಾಳಿ ಸಂದರ್ಭದಲ್ಲಿ ಉಪ ಕೃಷಿ ನಿರ್ದೇಶಕ ಮೃತ್ಯುಂಜಯ, ಸಹಾಯಕ ಕೃಷಿ ನಿರ್ದೇಶಕರಾದ ಪ್ರವೀಣ್ ಹಾಗೂ ಶೇಖಪ್ಪ, ಬಳ್ಳಾರಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿಗಳಾದ ಸೌಮ್ಯ, ಬಸವರಾಜ್, ಹಾಗೂ ಸಹಾಯಕ ಕೃಷಿ ಅಧಿಕಾರಿ ಸುಷ್ಮಾ ಸೇರಿದಂತೆ ಉಪ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿಗಳು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande