
ಕೋಲಾರ, ೦೯ ಡಿಸೆಂಬರ್ (ಹಿ.ಸ) :
ಆ್ಯಂಕರ್ : ನಗರಕ್ಕೆ ಹೊಂದಿಕೊAಡಿರುವ ಗಾಂಧಿನಗರದಿAದ ಗದ್ದೆಕಣ್ಣೂರಿಗೆ ಹೋಗುವ ರಸ್ತೆ ಪಕ್ಕದ ಸರ್ವೆ ನಂ ೪೫೩/೨ ರ ರಸ್ತೆಯ ಜಾಗವನ್ನು ಒತ್ತುವರಿ ಮಾಡುತ್ತಿದ್ದು ಕೂಡಲೇ ಒತ್ತುವರಿ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಗಾಂಧಿನಗರ ಸ್ಥಳೀಯರು ಜಿಲ್ಲಾಧಿಕಾರಿ ಕಛೇರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು
ಕೋಲಾರದ ಅಮಾನಿಕೆರೆಗೆ ಸೇರಿದ ೪೫೨/೩ ಸರ್ವೆ ನಂಬರ್ ಜಾಗವು ವಾರ್ಡ್ ೨ ಗಾಂಧಿನಗರ ನಗರಸಭೆ ವ್ಯಾಪ್ತಿಯಲ್ಲಿ ಬರುತ್ತಿದ್ದು ಗಾಂಧಿನಗರ ಗದ್ದೆಕಣ್ಣೂರು ಮುಖ್ಯ ರಸ್ತೆಗೆ ಹೊಂದಿಕೊ0ಡ0ತೆ ಹಾಲಿ ಇರುವ ಚರಂಡಿ ಪಕ್ಕದಲ್ಲಿ ಸುಮಾರು ೪೦ ಅಡಿ ಯಿಂದ ೧೫೦ ಮೀಟರ್ ಸರ್ಕಾರಿ ಜಾಗ ಲಭ್ಯವಿದ್ದು, ದಿವಂಗತ ಮುನಿಸ್ವಾಮಿಗೌಡರ ಮಕ್ಕಳು ಸದರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಲೇಔಟ್ ಅಭಿವೃದ್ಧಿ ಪಡಿಸುತ್ತಿದ್ದು ಕೂಡಲೇ ತಾವುಗಳು ಸ್ಥಳಕ್ಕೆ ಭೇಟಿ ನೀಡಿ ಸಂಬ0ಧಪಟ್ಟವರಿ0ದ ದಾಖಲೆಗಳನ್ನು ಪಡೆದು ಸರ್ಕಾರಿ ಜಾಗವನ್ನು ಉಳಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ
ಈ ಸಂದರ್ಭದಲ್ಲಿ ಸ್ಥಳೀಯರಾದ ಭಗತ್ ನಾರಾಯಣಸ್ವಾಮಿ, ಎಂ.ವಿಜಯಕೃಷ್ಣ, ರಾಮಚಂದ್ರಪ್ಪ, ಕೆ.ವಿ.ಮಂಜುನಾಥ್, ಪವಿತ್ರಕುಮಾರ್, ನರೇಶ್, ಗಡ್ಡಂ ಮುನಿರಾಜು ಹಾಜರಿದ್ದರು.
ಚಿತ್ರ : ಕೋಲಾರ ನಗರ ಗಾಂಧಿನಗರದಿ0ದ ಗದ್ದೆಗಣ್ಣೂರಿಗೆ ಹೋಗುವ ರಸ್ತೆ ಒತ್ತುವರಿಯಾಗಿದ್ದು, ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಗಾಂಧಿನಗರ ನಿವಾಸಿಗಳು ಮನವಿ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್