
ಕೊಟ್ಟಾಯಂ, 09 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ಅಂಚೆ ಇಲಾಖೆ ಮಂಗಳವಾರ ಕೇರಳದ ಕೊಟ್ಟಾಯಂನ CMS ಕಾಲೇಜಿನಲ್ಲಿ ರಾಜ್ಯದ ಮೊದಲ Gen-Z ಬಹುಪಯೋಗಿ ಅಂಚೆ ಕಚೇರಿ ವಿಸ್ತರಣಾ ಕೌಂಟರ್ ಅನ್ನು ಉದ್ಘಾಟಿಸಿದೆ. ಹೊಸ ಪೀಳಿಗೆ ವಿದ್ಯಾರ್ಥಿಗಳನ್ನು ಧ್ಯೇಯವಿಟ್ಟು ವಿನ್ಯಾಸಗೊಳಿಸಲಾದ ಈ ಆಧುನಿಕ ಅಂಚೆ ಕೇಂದ್ರವನ್ನು ಕೇರಳ ಕೇಂದ್ರ ಪ್ರದೇಶದ ಅಂಚೆ ಸೇವೆಗಳ ನಿರ್ದೇಶಕ ಎನ್.ಆರ್. ಗಿರಿ ಚಾಲನೆ ನೀಡಿದರು. ವಿಶೇಷವೆಂದರೆ, ಇದರ ಸಂಪೂರ್ಣ ವಿನ್ಯಾಸವನ್ನು CMS ಕಾಲೇಜಿನ ವಿದ್ಯಾರ್ಥಿಗಳು ಇಂಡಿಯಾ ಪೋಸ್ಟ್‌ನ ಸಹಯೋಗದಿಂದ ಸಿದ್ಧಪಡಿಸಿದ್ದಾರೆ.
ಕೇಂದ್ರ ಸಂವಹನ ಸಚಿವಾಲಯದ ಮಾಹಿತಿ ಪ್ರಕಾರ, ಈ ನವೀಕರಿಸಿದ ಅಂಚೆ ಕಚೇರಿ ವಿದ್ಯಾರ್ಥಿಗಳಿಗೆ ಅಧ್ಯಯನ, ಕೆಲಸ ಮತ್ತು ಅಂಚೆ ಸೇವೆಗಳನ್ನು ಒಂದೇ ಸ್ಥಳದಲ್ಲಿ ಬಳಸುವ ಸುಲಭ ವಾತಾವರಣ ಒದಗಿಸುತ್ತದೆ. ಯುವಕರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಪ್ರಕೃತಿ-ವಿಷಯದ ಒಳಸಜ್ಜೆ, ಸೃಜನಶೀಲ ನೋಟ ಮತ್ತು ವಿಶಾಲ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.
ಪಿಕ್ನಿಕ್ ಶೈಲಿಯ ಆಸನಗಳು, ಉದ್ಯಾನಗಳು, ಮರುಬಳಕೆಯ ಟೈರ್‌ಗಳಿಂದ ತಯಾರಿಸಿದ ಕುರ್ಚಿಗಳು ಸೇರಿದಂತೆ ಹಸಿರು-ಸುಸಜ್ಜಿತ ಪರಿಸರವನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೌಂಟರ್ ಹತ್ತಿರ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು ಕೂಡ ಒದಗಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa