ಭಯೋತ್ಪಾದನೆ ವಿರುದ್ದ ಜಾಗತಿಕ ಒಗ್ಗಟ್ಟು ಅಗತ್ಯ : ನ್ಯಾ.ರಾಮಸುಬ್ರಮಣಿಯನ್
ನವದೆಹಲಿ, 09 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಹವಾಮಾನ ಬದಲಾವಣೆ, ಪರಿಸರ ನಾಶ, ಸಂಘರ್ಷಗಳು ಮತ್ತು ಭಯೋತ್ಪಾದನೆಯಂತಹ ಗಂಭೀರ ಸವಾಲುಗಳಿಂದ ಮಾನವೀಯತೆ ಸುತ್ತುವರಿಯಲ್ಪಟ್ಟಿದ್ದು, ಇವುಗಳನ್ನು ಎದುರಿಸಲು ಗಡಿಗಳು ಮತ್ತು ತಲೆಮಾರುಗಳನ್ನು ಮೀರಿ ಒಗ್ಗಟ್ಟಿನ ಅಗತ್ಯವಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ
Nhrc


ನವದೆಹಲಿ, 09 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಹವಾಮಾನ ಬದಲಾವಣೆ, ಪರಿಸರ ನಾಶ, ಸಂಘರ್ಷಗಳು ಮತ್ತು ಭಯೋತ್ಪಾದನೆಯಂತಹ ಗಂಭೀರ ಸವಾಲುಗಳಿಂದ ಮಾನವೀಯತೆ ಸುತ್ತುವರಿಯಲ್ಪಟ್ಟಿದ್ದು, ಇವುಗಳನ್ನು ಎದುರಿಸಲು ಗಡಿಗಳು ಮತ್ತು ತಲೆಮಾರುಗಳನ್ನು ಮೀರಿ ಒಗ್ಗಟ್ಟಿನ ಅಗತ್ಯವಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಅಧ್ಯಕ್ಷ ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನದ ಪೂರ್ವಸಂಧ್ಯೆಯಲ್ಲಿ ರಾಷ್ಟ್ರಕ್ಕೆ ನೀಡಿರುವ ಸಂದೇಶದಲ್ಲಿ ಅವರು, ಮಾನವ ಹಕ್ಕುಗಳು ನಮ್ಮ ದೈನಂದಿನ ಜೀವನದ ಮೂಲ, ಮಾತನಾಡುವ ಸ್ವಾತಂತ್ರ್ಯದಿಂದ ಹಿಡಿದು ಭಯವಿಲ್ಲದೆ ಬದುಕುವ ಹಕ್ಕುವರೆಗೆ, ಪ್ರತಿಯೊಂದು ಹಕ್ಕು ಮಾನವ ಘನತೆಗೆ ನೇರವಾಗಿ ಸಂಬಂಧಿಸಿದೆ ಎಂದು ಹೇಳಿದರು.

ಮೂರು ದಶಕಗಳಿಗೂ ಹೆಚ್ಚು ಅವಧಿಯಿಂದ ಎನ್‌ಎಚ್‌ಆರ್‌ಸಿ ದೇಶದಲ್ಲಿ ಮಾನವ ಹಕ್ಕುಗಳನ್ನು ಉಳಿಸುವುದು, ದುರ್ಬಲ ವರ್ಗಗಳ ಹಕ್ಕುಗಳಿಗೆ ನ್ಯಾಯ ಒದಗಿಸುವುದು, ಮತ್ತು ಜಾಗತಿಕ ವೇದಿಕೆಗಳಲ್ಲಿ ಭಾರತದ ಮಾನವ ಹಕ್ಕು ಬದ್ಧತೆಯನ್ನು ಬಲಪಡಿಸುವ ಕೆಲಸದಲ್ಲಿ ನಿರಂತರವಾಗಿ ತೊಡಗಿಕೊಂಡಿದೆ ಎಂದು ಅವರು ನೆನಪಿಸಿದರು.

ಆಯೋಗವು ಭಾರತದ ಸಂವಿಧಾನದ ಮೌಲ್ಯಗಳು ಮತ್ತು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ತತ್ವಗಳಿಂದ ಪ್ರೇರಿತವಾಗಿದೆ. 1948ರ ಡಿಸೆಂಬರ್ 10ರಂದು ವಿಶ್ವಸಂಸ್ಥೆಯು ಈ ಘೋಷಣೆಯನ್ನು ಅಂಗೀಕರಿಸಿದ ದಿನವನ್ನು ಸ್ಮರಿಸಲು ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande