
ನವದೆಹಲಿ, 09 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಖಾಸಗಿ ವಿಮಾನಯಾನ ಸಂಸ್ಥೆ ಇಂಡಿಗೋದ ಚಳಿಗಾಲದ ವಿಮಾನ ವೇಳಾಪಟ್ಟಿಯನ್ನು ಶೇ. 5ರಷ್ಟು ಕಡಿತಗೊಳಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮಂಗಳವಾರ ಆದೇಶ ಹೊರಡಿಸಿದೆ. ಹೊಸ ತಿದ್ದುಪಡಿಯಿಂದ ಇಂಡಿಗೋ ಪ್ರತಿದಿನ ಸುಮಾರು 110 ವಿಮಾನಗಳನ್ನು ಕಡಿಮೆ ಹಾರಾಟ ನಡೆಸಬೇಕಾಗಿದೆ.
ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ ಪ್ರತಿದಿನ ಸದ್ಯಕ್ಕೆ ಸುಮಾರು 2,200 ವಿಮಾನಗಳನ್ನು ಹಾರಾಟ ನಡೆಸುತ್ತಿತ್ತು. ಆದರೆ ಡಿಸೆಂಬರ್ 1ರಿಂದ ಸಂಭವಿಸುತ್ತಿರುವ ವ್ಯಾಪಕ ವಿಮಾನ ವ್ಯತ್ಯಯಗಳ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಶೇಕಡಾ ಐದು ರಷ್ಟು ತಗ್ಗಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಡಿಜಿಸಿಎ ಸೂಚನೆಯಂತೆ, ಇಂಡಿಗೋ ತನ್ನ ಎಲ್ಲಾ ಮಾರ್ಗಗಳಲ್ಲಿ ವಿಮಾನಗಳ ಹಾರಾಟವನ್ನು ಕಡಿತಗೊಳಿಸಬೇಕು. ಪರಿಷ್ಕೃತ ಚಳಿಗಾಲದ ವೇಳಾಪಟ್ಟಿಯನ್ನು ಬುಧವಾರ ಸಂಜೆ 5 ಗಂಟೆಯೊಳಗೆ ಡಿಜಿಸಿಎಗೆ ಸಲ್ಲಿಸಲು ಸೂಚಿಸಲಾಗಿದೆ.
ಡಿಜಿಸಿಎ ಜಾರಿಗೊಳಿಸಿದ ನವೆಂಬರ್ ತಿಂಗಳ ಚಳಿಗಾಲದ ವೇಳಾಪಟ್ಟಿಯ ಪ್ರಕಾರ ಇಂಡಿಗೋಗೆ ವಾರಕ್ಕೆ 15,014 ನಿರ್ಗಮನಗಳು ಮತ್ತು ಒಟ್ಟು 64,346 ವಿಮಾನಗಳ ಕಾರ್ಯಾಚರಣೆಗೆ ಅನುಮತಿ ನೀಡಲಾಗಿತ್ತು. ಆದರೆ ನೈಜ ಕಾರ್ಯಾಚರಣೆಯ ಅಂಕಿಅಂಶಗಳ ಪ್ರಕಾರ ಇಂಡಿಗೋ ಕೇವಲ 59,438 ವಿಮಾನಗಳನ್ನು ಮಾತ್ರ ನಡೆಸಿದೆ. ನವೆಂಬರ್‌ನಲ್ಲಿ ಒಟ್ಟು 951 ವಿಮಾನಗಳು ರದ್ದುಗೊಂಡಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa