
ಕೋಲಾರ, ೦೯ ಡಿಸೆಂಬರ್ (ಹಿ.ಸ) :
ಆ್ಯಂಕರ್ : ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷದ ರೈತ ಮೋರ್ಚಾ ಆಶ್ರಯದಲ್ಲಿ ಕೋಲಾರದ ಮೆಕ್ಕೆ ಸರ್ಕಲ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲು ಎತ್ತಿನ ಬಂಡಿಗಳನ್ನು ತರೆಸಲಾಗಿತ್ತು. ಎತ್ತುಗಳ ತಲೆಗೆ ಬಿಜೆಪಿ ಬಾವುಟಗಳನ್ನು ಹಾಕಲಾಗಿತ್ತು. ಪ್ರತಿಭಟನೆ ಆರಂಭವಾಗುತ್ತಿದ್ದ0ತೆ ತಮಟೆ ಶಬ್ದಕ್ಕೆ ಬೆದರಿದ ಎತ್ತುಗಳು ಬಂಡಿ ಮಾಲೀಕನನ್ನು ಎತ್ತಿ ಎಸೆದು ನೆಲಕ್ಕೆ ಕೆಡವಿದವು. ಎತ್ತುಗಳು ಬೆದರಿದ ಕಾರಣ ಸ್ಥಳದಲ್ಲಿ ಸ್ವಲ್ಪ ಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಎತ್ತುಗಳನ್ನು ಸಮಾದಾನಪಡಿಸಲು ಹೆಣಗಾಡಬೇಕಾಯಿತು. ಎತ್ತು ಬಂಡಿ ಮಾಲೀಕನನ್ನು ಎಸೆದ ತೀವ್ರತೆಗೆ ಆತ ನೆಲಕ್ಕೆ ಉರುಳಿಬಿದ್ದು ತೀವ್ರವಾಗಿ ಗಾಯಗೊಂಡರು. ಎತ್ತುಗಳನ್ನು ಸಮಾಧಾನಪಡಿಸುವ ವೇಳೆಗೆ ಬಿಜೆಪಿ ಕಾರ್ಯಕರ್ತರು ಹಣ್ಣುಗಾಯಿ ನೀರುಗಾಯಿ ಆದರು. ಸಮಾಧಾನಗೊಂಡ ಎತ್ತು ಮಾಲೀಕನನ್ನು ಎಳೆದುಕೊಂಡು ತಾಲ್ಲೂಕು ಕಚೇರಿ ಆವರಣಕ್ಕೆ ಪ್ರವೇಶ ಮಾಡಿತು.
ಚಿತ್ರ : ಕೋಲಾರದಲ್ಲಿ ನಡೆದ ಬಿಜೆಪಿ ಪ್ರತಿಭಟನೆಯ ವೇಳೆ ಎತ್ತು ಬೆದರಿ ಬಂಡಿ ಮಾಲೀಕನನ್ನು ನೆಲಕ್ಕೆ ಕೆಡವಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್