

ಬಳ್ಳಾರಿ, 09 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿದ್ಯಾರ್ಥಿಗಳು ಯಾವುದೇ ಪರೀಕ್ಷೆಗಳನ್ನು ಎದುರಿಸಲು ಭಯಭೀತರಾಗಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ.
ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ, ಪರೀಕ್ಷೆಗಳು ನಿಮ್ಮ ಸಾಮಥ್ರ್ಯ ಪರೀಕ್ಷಿಸುವುದಿಲ್ಲ; ಬದಲಾಗಿ ನಿಮ್ಮ ಸಂಕಲ್ಪ ಮತ್ತು ಶಿಸ್ತನ್ನು ಪರೀಕ್ಷಿಸುತ್ತವೆ. ಹಾಗಾಗಿ ಆತ್ಮವಿಶ್ವಾಸ ಮತ್ತು ಸಮನ್ವಿತ ಪರಿಶ್ರಮ ಅಗತ್ಯವಾಗಿದೆ ಎಂದು ತಿಳಿಸಿದರು.
ಒತ್ತಡ ಸಾಮಾನ್ಯ. ಆತಂಕಕ್ಕೆ ಮನಸ್ಸನ್ನು ಕೊಡಬಾರದು. ಕಠಿಣವಾಗಿ ಪರಿಶ್ರಮಿಸಿದರೆ ಫಲಗಳು ನಿಮಗೆ ಖಂಡಿತ ಸಿಗುತ್ತವೆ. ಇದು ನಿಮ್ಮ ಜೀವನದ ಕೊನೆಯ ಪರೀಕ್ಷೆಯಲ್ಲ. ಎದರಬಾರದು, ಜಾಗೃತಿಯಿಂದ ಓದಿ, ನಿಮ್ಮ ಸಾಮಥ್ರ್ಯ ನಂಬಬೇಕು ಎಂದರು.
ಪ್ರತಿದಿನ ವಿಷಯಗಳ ಪುನರಾವರ್ತನೆ ಮಾಡಿ, ಹಿಂದಿನ ಪ್ರಶ್ನೆಪತ್ರಿಕೆಗಳನ್ನು ನೋಡಿ, ಮುಖ್ಯ ವಿಷಯಗಳನ್ನು ಗುರುತಿಸುವ ಮೂಲಕ ಪ್ರಗತಿ ಹೊಂದಬೇಕು. ಇದು ಯಶಸ್ಸಿನ ಸೂತ್ರ ಎಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ವಿ.ಇಂದ್ರಾಣಿ ಅವರು, ಪರಿಶ್ರಮದಿಂದ ಅಭ್ಯಸಿಸಿದರೆ ಯಶಸ್ಸು ನಿಮ್ಮದು. ಪರೀಕ್ಷೆಗಳು ಕೇವಲ ಒಂದು ಹಂತ ಆದರೆ ನೀವು ಕಟ್ಟುತ್ತಿರುವ ಭವಿಷ್ಯ ಅದಕ್ಕಿಂತ ಬಹಳ ದೊಡ್ಡದು ಎಂದು ಕಿವಿಮಾತು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ದೇವದಾನಮ್ಮ, ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ಜಿಲ್ಲಾ ಏಡ್ಸ್ ಮೇಲ್ವಿಚಾರಕ ಗೀರೀಶ್, ಐಸಿಟಿಸಿ ಆಪ್ತಸಮಾಲೋಚಕ ಜಗದೀಶ ಅವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್