
ಕೊಪ್ಪಳ, 09 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಈ ತರಬೇತಿಗೆ ಸಹಕಾರ ಇಲಾಖೆ ಸಿಬ್ಬಂದಿಗಳನ್ನು, ಸಹಕಾರ ಸಂಘ, ಸಂಸ್ಥೆಗಳ ಮತ್ತು ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ಕೊಪ್ಪಳ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ.
ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್, ಕಲಬುರ್ಗಿ ತರಬೇತಿ ಕೇಂದ್ರದ ಮೂಲಕ ಸಹಕಾರ ಇಲಾಖೆ ಸಿಬ್ಬಂದಿಗಳಿಗೆ, ಸಹಕಾರ ಸಂಘ, ಸಂಸ್ಥೆಗಳ ಮತ್ತು ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ 2026ರ ಜನವರಿ ಮಾಹೆಯಲ್ಲಿ ಪ್ರಾರಂಭವಾಗುವ 6 ತಿಂಗಳ (180 ದಿನಗಳ) ರೆಗ್ಯೂಲರ್ ಮತ್ತು ದೂರ ಶಿಕ್ಷಣದ ಮೂಲಕ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಯನ್ನು ನೀಡುತ್ತಿದ್ದು, ಈ ತರಬೇತಿಯನ್ನು ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್, ಆದರ್ಶ ನಗರ, ಸೇಡಂ ರಸ್ತೆ, ಕಲಬುರ್ಗಿ-585105, ದೂರವಾಣಿ ಸಂಖ್ಯೆ: 08472-245340, ಇ-ಮೇಲ್ ವಿಳಾಸ www.kscfdcm.co.in ಇವರನ್ನು ಸಂಪರ್ಕಿಸುವಂತೆ ಕೊಪ್ಪಳ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರ ಕಾರ್ಯಾಲಯದ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್