ರಾಯಚೂರು : ಅಂಗನವಾಡಿ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ರಾಯಚೂರು, 09 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಯಾಪಲದಿ
ರಾಯಚೂರು : ಅಂಗನವಾಡಿ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ


ರಾಯಚೂರು, 09 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಯಾಪಲದಿನ್ನಿಯ ಕೇಂದ್ರ-2ರ ಅಂಗನವಾಡಿ ಕಾರ್ಯಕರ್ತೆ ಹುದ್ದೆಯು ಪರಿಶಿಷ್ಟ ಜಾತಿಗೆ, ಮಮದಾಪೂರು ಗ್ರಾಮ ಪಂಚಾಯತಿಯ ಆಶಾಪೂರ ಕೇಂದ್ರ-2 ಪರಿಶಿಷ್ಟ ಜಾತಿಗೆ, ಆತ್ಕೂರು ಕೇಂದ್ರ-4 ಪರಿಶಿಷ್ಟ ಪಂಗಡಕ್ಕೆ, ವಾರ್ಡ್ ನಂ.01ರ ರಾಮಾಂಜನೇಯ್ಯ ಕಾಲೋನಿ ಕೇಂದ್ರ-1 ಪರಿಶಿಷ್ಟ ಜಾತಿಗೆ, ಮಂಗಳವಾರಪೇಟೆ ಕೇಂದ್ರ- 5 ಪರಿಶಿಷ್ಟ ಜಾತಿಗೆ, ಎಲ್.ಬಿ.ಎಸ್ ನಗರ ಕೇಂದ್ರ-4 ಸಾಮಾನ್ಯ ವರ್ಗಕ್ಕೆ, ಯರಮರಸ್ ಕ್ಯಾಂಪ್ ಕೇಂದ್ರ-2 ಸಾಮಾನ್ಯ ವರ್ಗಕ್ಕೆ, ಮಾಣಿಕನಗರ ಕೇಂದ್ರ-1 ಸಾಮಾನ್ಯ ವರ್ಗ, ಉಮರನಗರ ಕೇಂದ್ರ-2 ಸಾಮಾನ್ಯ ವರ್ಗ, ಹುಂಡೇಕಾರ ಕಾಲೋನಿ ಕೇಂದ್ರ ಸಾಮಾನ್ಯ ವರ್ಗ, ಎಲ್.ಬಿ.ಎಸ್ ನಗರ ಕೇಂದ್ರ-1 ಸಾಮಾನ್ಯ ವರ್ಗ, ವಾರ್ಡ್ ನಂ:23ರ ಗದ್ವಾಲ ರಸ್ತೆ ಕೇಂದ್ರ-4 ಸಾಮಾನ್ಯ ವರ್ಗ, ನೀರಬಾವಿಕುಂಟಾ ಕೇಂದ್ರ-6 ಸಾಮಾನ್ಯ ವರ್ಗ, ವಾರ್ಡ್ ನಂ:2 & 3 ಮದರಟ್ರಸ್ಟ್ ಸಾಮಾನ್ಯ ವರ್ಗ, ಸಗಮಕುಂಟಾ ಗ್ರಾಮ ಪಂಚಾಯತಿಯ ಕೊರ್ವಿಹಾಳ ಕೇಂದ್ರ-2 ಸಾಮಾನ್ಯ ವರ್ಗ, ಮಡ್ಡಿಪೇಟೆ ಕೇಂದ್ರ-6 ಸಾಮಾನ್ಯ ವರ್ಗ, ಕೆ.ಇ.ಬಿ ಕಾಲೋನಿ ಕೇಂದ್ರ ಸಾಮಾನ್ಯ ವರ್ಗ, ವಾರ್ಡ್ ನಂ:02ರ ಸುಖಶಾಂತಿ ನಗರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಈ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಆಸಕ್ತರು ಜನವರಿ 7ರೊಳಗಾಗಿ ಆನ್‍ಲೈನ್ ವಿಳಾಸ: https://karnemakaone.kar.nic.in/abcd/ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್‍ಲೈನ್‍ನಲ್ಲಿ ಅಪೂರ್ಣ ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ರಾಯಚೂರು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಾರ್ಯಾಲಯ ಕಚೇರಿಯ ಸಮಯದಲ್ಲಿ ಸಂಪರ್ಕಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande