
ಕೊಪ್ಪಳ, 09 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಂಚಾರಿ ಹಾಗೂ ಮೋಟಾರು ವಾಹನ ಕಾಯಿದೆ/ ನಿಯಮಗಳ ಉಲ್ಲಂಘನೆ ಸಂಬAಧ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶವಿದ್ದು, ದಂಡದ ಮೊತ್ತದಲ್ಲಿ ಶೇ 50 ರಷ್ಟು ರಿಯಾಯತಿ ಸೌಲಭ್ಯವಿದೆ.
ಕರ್ನಾಟಕ ರಾಜ್ಯದ ಸಂಚಾರಿ ಹಾಗೂ ಸಾರಿಗೆ ಇಲಾಖೆಗಳಲ್ಲಿ ಸಂಚಾರಿ ಹಾಗೂ ಮೋಟಾರು ವಾಹನ ಕಾಯಿದೆ/ನಿಯಮಗಳ ಉಲ್ಲಂಘನೆ ಸಂಬAಧ 1991-92 ರಿಂದ 2019-20ರ ಅವಧಿಯಲ್ಲಿ ಪ್ರಕರಣ ದಾಖಲಾಗಿ, ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ 50% (ಶೇಕಡಾ ಐವತ್ತರಷ್ಟು ಮಾತ್ರ) ರಿಯಾಯತಿ ನೀಡಿ ದಿನಾಂಕ: 21.11.2025 ರಿಂದ 12.12.2025ರವರೆಗೆ ಕಾಲಾವಕಾಶ ನೀಡಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ.
ಈ ಅವಧಿಯು ಇನ್ನೂ ಎರಡು-ಮೂರು ದಿನಗಳಲ್ಲಿ ಮುಕ್ತಾಯವಾಗಲಿದ್ದು, ಎಲ್ಲಾ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ದರಗದ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್