ಶಾಲೆಯೇ ದೇವಾಲಯ, ಮಕ್ಕಳೇ ದೇವರು : ಸಚಿವ ಪಾಟೀಲ
ವಿಜಯಪುರ, 08 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಜಾಗತಿಕ ಖ್ಯಾತಿ ಯ ಟೊಯೊಟಾ ಕಿರ್ಲೋಸ್ಕರ್ ಕಂಪನಿ ಸಿ.ಎಸ್.ಆರ್. ಅನುದಾನದಡಿ ಸರಕಾರಿ ಶಾಲಾ, ಕಾಲೇಜುಗಳ ಅಭಿವೃದ್ಧಿಗೆ ಅನುದಾನ ಒದಗಿಸಿರುವುದು ದಾನಗಳಲ್ಲಿಯೇ ಶ್ರೇಷ್ಠವಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎ
ಪಾಟೀಲ


ವಿಜಯಪುರ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಜಾಗತಿಕ ಖ್ಯಾತಿ ಯ ಟೊಯೊಟಾ ಕಿರ್ಲೋಸ್ಕರ್ ಕಂಪನಿ ಸಿ.ಎಸ್.ಆರ್. ಅನುದಾನದಡಿ ಸರಕಾರಿ ಶಾಲಾ, ಕಾಲೇಜುಗಳ ಅಭಿವೃದ್ಧಿಗೆ ಅನುದಾನ ಒದಗಿಸಿರುವುದು ದಾನಗಳಲ್ಲಿಯೇ ಶ್ರೇಷ್ಠವಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ಬಬಲೇಶ್ವರ ತಾಲೂಕಿನ ಮಮದಾಪುರ ಸರಕಾರಿ ಪದವಿ ಕಾಲೇಜು ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ನಗರದ ಖಾಸಗಿ ಶಾಲೆ ಕಾಲೇಜುಗಳನ್ನು ಮೀರಿಸುವ ಕಟ್ಟಡಗಳನ್ಬು ಮಮದಾಪುರ ಭಾಗದಲ್ಲಿ ನಿರ್ಮಿಸಲಾಗಿದೆ. ಶಾಲೆಯೇ ದೇವಾಲಯ, ಮಕ್ಕಳೇ ದೇವರು ಎಂಬ ನಾಣ್ಣುಡಿಗೆ ತಕ್ಕಂತೆ ಈ ಭಾಗಕ್ಕೆ ಶಾಲೆ, ಕಾಲೇಜು ಕಟ್ಟಣ ನಿರ್ಮಾಣಕ್ಕೆ ಟೊಯೊಟಾ ಕಿರ್ಲೋಸ್ಕರ್ ಕಂಪನಿಯಿಂದ ಅತಿ ಹೆಚ್ಚು ಅನುದಾನ ದೊರೆತಿದೆ ಎಂದು ಅವರು ಹೇಳಿದರು.

ಮಮದಾಪುರದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಜೀವವೈವಿದ್ಯತೆಯ ಅರಣ್ಯ ಪ್ರದೇಶ ನಿರ್ಮಾಣ, ಮಕ್ಕಳಿಗೆ ವಿಜ್ಞಾನ ಗ್ರಂಥಾಲಯ, ಸರಕಾರಿ ಶಾಲೆ- ಕಾಲೇಜುಗಳಿಗೆ ಕಟ್ಟಡ ನಿರ್ಮಾಣ, ಮಮದಾಪುರ ಕೆರೆ ತುಂಬುವ ಯೋಜನೆ 20 ಹಳ್ಳಿಗಳಿಗೆ ಆಧಾರವಾಗಿದ್ದು, ರೈತರು ಪ್ರತಿವರ್ಷ ರೂ. 300 ಕೋ. ನಷ್ಟು ಮೌಲ್ಯದ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ಹೀಗೆ ಮಮದಾಪುರ ಅಭಿವೃದ್ಧಿಯತ್ತ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಹೊಸ ತಾಲೂಕು ಆಗಿ ಪರಿವರ್ತನೆ ಆಗುವುದರಲ್ಲಿ ಸಂಶಯವೇ ಇಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಮದಾಪುರ ವಿರಕ್ತಮಠದ ಶ್ರೀ ಮುರುಘೇಂದ್ರ ಮಹಾಸ್ವಾಮೀಜಿ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಗಂಗೂರ, ಉಪಾಧ್ಯಕ್ಷ ಕೃಷ್ಣ ಜಿ. ಕುಲಕರ್ಣಿ, ಮುಖಂಡರಾದ ವಿರಣ್ಣ ಕೊಪ್ಪದ, ಟೊಯಾಟಾ ಕಂಪನಿಯ ಉಪಾಧ್ಯಕ್ಷ ರಮೇಶ ರಾವ, ಕಿರಣ, ಸಚಿವರ ಆಪ್ತ ಕಾರ್ಯದರ್ಶಿ ಪಿ. ಎಸ್. ನರೆಂದ್ರ, ಮುಖಂಡರಾದ ಮಲ್ಲಪ್ಪ ದಳವಾಯಿ, ಕುಮಾರ ದೇಸಾಯಿ, ಮಧುರಾಜ್ ಕುಲಕರ್ಣಿ, ಅಪ್ಪುಗೌಡ ಪಾಟೀಲ ಶೇಗುಣಸಿ, ಚಂದ್ರಶೇಖರ ಪೂಜಾರಿ, ಬಸು ಗಲಗಲಿ, ರಫೀಕ್ ಕಾನೆ, ವೆಂಕಟೇಶ ಬಿರಾದಾರ ಕೊಡಬಾಗಿ, ಈರನಗೌಡ ಬಿರಾದಾರ. ಸಿ. ಆರ್. ಪಾಟೀಲ, ಡಾ. ಶಿವಾನಂದ ಹಿರೇಮಠ, ಸುರೇಶ ಕರಿಕಲ್ಲ ಮುಂತಾದವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande