ಕಂಪ್ಲಿ : ಡಿ.10 ರಂದು ವಿದ್ಯುತ್ ವ್ಯತ್ಯಯ
ಕಂಪ್ಲಿ, 08 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕಂಪ್ಲಿ ಜೆಸ್ಕಾಂ ವ್ಯಾಪ್ತಿಯ ಮೆಟ್ರಿ 110/11ಕೆವಿ ವಿದ್ಯುತ್ ಉಪ ಕೇಂದ್ರದಲ್ಲಿ ವಿದ್ಯುತ್ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುದರಿಂದ ಡಿ.10 ಬೆಳಿಗ್ಗೆ 09 ರಿಂದ ಮಧ್ಯಾಹ್ನ 03 ಗಂಟೆಯವರೆಗೆ ಮೆಟ್ರಿ ಉಪಕೇಂದ್ರದ ವ್ಯಾಪ್ತಿಗೆ ಬರುವ ಗ್ರಾಮಗಳ
ಕಂಪ್ಲಿ : ಡಿ.10 ರಂದು ವಿದ್ಯುತ್ ವ್ಯತ್ಯಯ


ಕಂಪ್ಲಿ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕಂಪ್ಲಿ ಜೆಸ್ಕಾಂ ವ್ಯಾಪ್ತಿಯ ಮೆಟ್ರಿ 110/11ಕೆವಿ ವಿದ್ಯುತ್ ಉಪ ಕೇಂದ್ರದಲ್ಲಿ ವಿದ್ಯುತ್ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುದರಿಂದ ಡಿ.10 ಬೆಳಿಗ್ಗೆ 09 ರಿಂದ ಮಧ್ಯಾಹ್ನ 03 ಗಂಟೆಯವರೆಗೆ ಮೆಟ್ರಿ ಉಪಕೇಂದ್ರದ ವ್ಯಾಪ್ತಿಗೆ ಬರುವ ಗ್ರಾಮಗಳ ನಿರಂತರ ಜ್ಯೋತಿ ಮಾರ್ಗಗಳಾದ ಎಫ್2-ಗೋನಾಳ್ ಮತ್ತು ಎಫ್4-ಮೆಟ್ರಿ ಮಾರ್ಗಗಳಲ್ಲಿ ಮತ್ತು ಪಂಪ್ ಸೆಟ್ ವಿದ್ಯುತ್ ಮಾರ್ಗಗಳಾದ ಎಫ್1-ಮಾವಿನಹಳ್ಳಿ, ಎಫ್3-ಜವುಕು, ಎಫ್5-ದೇವಲಾಪುರ ಮತ್ತು ಎಫ್6-ಉಪ್ಪಾರಹಳ್ಳಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮೆಟ್ರಿಗೆ ಸಂಬ0ಧಿಸಿದ ಪಂಪ್ ಸೆಟ್(ಐಪಿ ಸೆಟ್) ಮೇಲೆ ತಿಳಿಸಿದ ಮಾರ್ಗಗಳಲ್ಲಿ ಅಂದು ಬೆಳಿಗ್ಗೆ 04 ರಿಂದ 09 ಗಂಟೆಯವರೆಗೆ (5 ಗಂಟೆ) ಉಳಿದ 2 ತಾಸುಗಳು 3 ಗಂಟೆಯ ನಂತರ ವಿದ್ಯುತ್ ಸರಬರಾಜು ಮಾಡಲಾಗುವುದು.

ಹಾಗಾಗಿ ವಿದ್ಯುತ್ ಗ್ರಾಹಕರು, ಸಾರ್ವಜನಿಕರು ಸಹಕರಿಸಬೇಕು ಹಾಗು ವಿದ್ಯುತ್ ವ್ಯತ್ಯಯ ದಿನದಂದು ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕಾರ್ಯ ಪೂರ್ವಾನುಮತಿ ಇಲ್ಲದೇ ಮಾಡಬಾರದು. ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದ್ದಲ್ಲಿ ಜೆಸ್ಕಾಂ ಕಂಪನಿ ಜವಾಬ್ದಾರಿಯಾಗಿರುವುದಿಲ್ಲ ಎಂದು ಕಂಪ್ಲಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande