ನೆಹರು ಹೊಂದಾಣಿಕೆಯ ಶಿಲ್ಪಿಯಾಗಿದ್ದರು : ಬೊಮ್ಮಾಯಿ
ನವದೆಹಲಿ, 08 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕಾಂಗ್ರೆಸ್ ನಲ್ಲಿ ಜವಾಹರಲಾಲ್ ನೆಹರು ಅವರು ಸ್ವಾತಂತ್ರ್ಯ ಪಡೆಯಲು ಅಷ್ಟೇ ಅಲ್ಲ ಸ್ವಾತಂತ್ರ್ಯದ ಲಾಭ ಪಡೆದು ಪ್ರಧಾನಿಯಾಗಲು ಅವಸರ ಮಾಡಿದ್ದರು. ಜವಾಹರಲಾಲ್ ನೆಹರು ಹೊಂದಾಣಿಕೆಯ ಶಿಲ್ಪಿಯಾಗಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮ
ನೆಹರು ಹೊಂದಾಣಿಕೆಯ ಶಿಲ್ಪಿಯಾಗಿದ್ದರು : ಬೊಮ್ಮಾಯಿ


ನವದೆಹಲಿ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕಾಂಗ್ರೆಸ್ ನಲ್ಲಿ ಜವಾಹರಲಾಲ್ ನೆಹರು ಅವರು ಸ್ವಾತಂತ್ರ್ಯ ಪಡೆಯಲು ಅಷ್ಟೇ ಅಲ್ಲ ಸ್ವಾತಂತ್ರ್ಯದ ಲಾಭ ಪಡೆದು ಪ್ರಧಾನಿಯಾಗಲು ಅವಸರ ಮಾಡಿದ್ದರು. ಜವಾಹರಲಾಲ್ ನೆಹರು ಹೊಂದಾಣಿಕೆಯ ಶಿಲ್ಪಿಯಾಗಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ದೆಹಲಿಯಲ್ಲಿ ವಂದೇ ಮಾತರಂ ಕುರಿತು ಕಾಂಗ್ರೆಸ್ ‌ಮುಖಂಡ ಜೈರಾಮ್ ರಮೇಶ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಜೈರಾಮ್ ರಮೇಶ್ ಬೇರೆ ರೀತಿಯ ಹೇಳಿಕೆ ನೀಡುವ ಮೂಲಕ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಯಾವುದೇ ರೀತಿಯ ಪ್ರಸ್ತುತತೆ ಇಲ್ಲ. ವಾಸ್ತವ ಏನು ಅಂದರೆ ಜವಾಹರ ಲಾಲ ನೇಹರು ಅವರು ಕಲ್ಕತ್ತಾದಲ್ಲಿ ವಂದೇ ಮಾತರಂನ ಕೆಲವು ಚರಣಗಳನ್ನು ತೆಗೆದುಹಾಕಲು ಪ್ರಸ್ತಾಪಿಸಿದ್ದರ ಆಧಾರದಲ್ಲಿ ಅಂದಿನ ಕಾಂಗ್ರೆಸ್ ಅಧಿವೇಶನದಲ್ಲಿ ಒಂದೇ ಮಾತರಂನ ಕೆಲವು ಸಾಲುಗಳನ್ನು ತೆಗೆದು ಹಾಕಲಾಯಿತು. ಅದು ವಾಸ್ತವ ಅದರಿಂದ ಓಡಿ ಹೋಗಲು ಸಾಧ್ಯವಿಲ್ಲ. ನೆಹರೂ ಹಿಂದುಸ್ತಾನ, ಭಾರತ ಮತ್ತು ಇಂಡಿಯಾ ಎಲ್ಲದರಲ್ಲೂ ಹೊಂದಾಣಿಕೆ ಮಾಡಿಕೊಂಡರು. ಅದರಿಂದ ಕೇವಲ ಒಂದೇ ಮಾತರಂ ವಿಭಜನೆ ಆಗಲಿಲ್ಲ, ದೇಶ ವಿಭಜನೆ ಆಯಿತು. ಕಾಂಗ್ರೆಸ್ ವಿಭಜನೆ ಆಯಿತು. ಅದರ ಪರಿಣಾಮ ಈಗಲೂ ಕಾಂಗ್ರೆಸ್ ನಲ್ಲಿ ವಿಭಜನೆ ನಿರಂತರ ಮುಂದುವರೆದಿದೆ. ಅದಕ್ಕೆ ಅವರು ಬೆಲೆ ತೆರಲೇಬೇಕು ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande