ಕಾಶೀ ವಿಶ್ವನಾಥ, ವಿಶಾಲಾಕ್ಷ್ಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ
ಬಳ್ಳಾರಿ, 08 ಡಿಸೆಂಬರ್ (ಹಿ.ಸ.) : ಆ್ಯಂಕರ್ : ನಗರದ ರಾಘವೇಂದ್ರ ಕಾಲೋನಿ 2ನೇ ಹಂತದಲ್ಲಿನ ಇಂಟೂರಿ ನಗರದಲ್ಲಿರುವ ಶ್ರೀ ಕಾಶೀ ವಿಶ್ವನಾಥ ವಿಶಾಲಾಕ್ಷಿ ದೇವಸ್ಥಾನದಲ್ಲಿ ದೇವಸ್ಥಾನದಲ್ಲಿ ವಿಗ್ರಹಗಳ ಪ್ರತಿಷ್ಠಾಪನೆ ನೆರವೇರಿಸಿ 42 ದಿನಗಳು ಮುಗಿದಿದ್ದ ಸಂದರ್ಭದಲ್ಲಿ ಪ್ರತಿಷ್ಠಾಪನಾ ಮಹೋ
ಕಾಶೀವಿಶ್ವನಾಥ – ವಿಶಾಲಾಕ್ಷ್ಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ

ಬಳ್ಳಾರಿ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ನಗರದ ರಾಘವೇಂದ್ರ ಕಾಲೋನಿ 2ನೇ ಹಂತದಲ್ಲಿನ ಇಂಟೂರಿ ನಗರದಲ್ಲಿರುವ ಶ್ರೀ ಕಾಶೀ ವಿಶ್ವನಾಥ ವಿಶಾಲಾಕ್ಷಿ ದೇವಸ್ಥಾನದಲ್ಲಿ ದೇವಸ್ಥಾನದಲ್ಲಿ ವಿಗ್ರಹಗಳ ಪ್ರತಿಷ್ಠಾಪನೆ ನೆರವೇರಿಸಿ 42 ದಿನಗಳು ಮುಗಿದಿದ್ದ ಸಂದರ್ಭದಲ್ಲಿ ಪ್ರತಿಷ್ಠಾಪನಾ ಮಹೋತ್ಸವದಿಂದ ಸತತವಾಗಿ 42 ದಿನಗಳ ಮಂಡಲಪೂಜಾ ಕಾರ್ಯಕ್ರಮಗಳು ಗಣಪತಿ ಪೂಜೆ, ನವಗ್ರಹ ಪೂಜಾ ಮತ್ತು ಮೃತ್ಯುಂಜಯ ಹೋಮಗಳು ಪ್ರಧಾನ ಅರ್ಚಕರಾದ ರಾಘವೇಂದ್ರ ಆಚಾರ್, ಸಂತೋಷ್ ಸ್ವಾಮಿ ಇವರ ನೇತೃತ್ವದಲ್ಲಿ ಸಂಪೂರ್ಣವಾಗಿ ಸೋಮವಾರ ನೆರವೇರಿದವು.

ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜಿ. ಸೋಮಶೇಖರರೆಡ್ಡಿ ಅವರು ಆಗಮಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

20ನೇ ವಾರ್ಡ್ ಪಾಲಿಕೆ ಸದಸ್ಯ ವಿವೇಕ್ (ವಿಕ್ಕಿ), ಮಾಜಿ ಪಾಲಿಕೆ ಸದಸ್ಯರಾದ ಕರಕೋಡಪ್ಪ ಸೇರಿದಂತೆ ಹಲವಾರು ಮುಖಂಡರು, ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

3,000ಕ್ಕೂ ಅಧಿಕ ಭಕ್ತಾದಿಗಳೆಲ್ಲರಿಗೂ ಅನ್ನಪ್ರಸಾದ ವಿತರಿಸಲಾಯಿತು.

ವೆಂಕಟಸಾಯಿ ಮುರಳಿ ಕೋಲಾಟ ಸಮಿತಿಯು ಕೋಡೂರು ಪದ್ಮಾವತಿ ಅವರ ನೇತೃತ್ವದಲ್ಲಿ 30 ಜನ ಮಹಿಳೆಯರಿಂದ ಕೋಲಾಟ ಪ್ರದರ್ಶನ - ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿದವು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande