ಕಾಂಗ್ರೆಸ್ ಸರ್ಕಾರಕ್ಕೆ ನಾನೇ ಟಾರ್ಗೆಟ್ : ಶಾಸಕ ಯತ್ನಾಳ
ವಿಜಯಪುರ, 08 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಸನಗೌಡ ಪಾಟೀಲ್‌ ಯತ್ನಾಳ್‌ದ್ದೆ ಅಂಜಿಕೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಪ್ರಚೋದನಕಾರಿ ಭಾಷಣ ತಡೆಗೆ ಹೊಸ ಕಾನೂನಕ್ಕೆ ಪ್ರತಿಕ್ರಿಯೆ ನೀಡಿದ ಅವರು,
ಯತ್ನಾಳ


ವಿಜಯಪುರ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಸನಗೌಡ ಪಾಟೀಲ್‌ ಯತ್ನಾಳ್‌ದ್ದೆ ಅಂಜಿಕೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಪ್ರಚೋದನಕಾರಿ ಭಾಷಣ ತಡೆಗೆ ಹೊಸ ಕಾನೂನಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆ ಕಾಯ್ದೆ ತರವುದಕ್ಕೆ ಟಾರ್ಗೆಟ್ ನಾನೇ ಆಗಿದ್ದೇನೆ. ಹಿಂದೂಗಳ ಪರವಾಗಿ ಯಾರು ಮಾತನಾಡೋರನ್ನು ಟಾರ್ಗೆಟ್ ಮಾಡಬೇಕು ಅನ್ನೋದು ಅವ್ರ ಉದ್ದೇಶ. ವಿಜಯೇಂದ್ರ, ಆರ್ ಅಶೋಕರನ್ನ ಅವ್ರು ಟಾರ್ಗೆಟ್ ಮಾಡಲ್ಲ.‌ ಆ ಬಿಲ್‌ನ್ನ ನನಗಾಗಿಯೇ ಜಾರಿಗೆ ತರ್ತಿದ್ದಾರೆ. ಹಾಗಾಗಿ ಹೆಚ್ ಕೆ ಪಾಟೀಲರಿಗೆ ಧನ್ಯವಾದ ಎಂದರು. ಇನ್ನೂ ಈ ಕಾಯ್ದೆಯನ್ನ ವಿರೋಧ ಮಾಡ್ತೇನೆ. ವಿರೋಧ ಮಾಡದೆ ಸಪೋರ್ಟ್ ಮಾಡಲಾ ಎಂದರು.

ಅಲ್ಲದೇ, ಗೋ ರಕ್ಷಣಾ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಗೋ ಪ್ರೇಮಿ ಶಾಸಕರು ಸೇರಿ ತೀರ್ಮಾನ ತೆಗೆದುಕೊಳ್ತೇವೆ. ಎಲ್ಲರೂ ಸೇರ್ತೆವೆ. ಇದು ಒಂದು ಪಾರ್ಟಿ ವಿಚಾರ ಅಲ್ಲ. ಗೋ, ಸನಾತನ ಧರ್ಮದ ಪರ ಇರೋರು ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್ ಪಕ್ಷದಲ್ಲಿಯೂ ಇದ್ದಾರೆ. ಎಲ್ಲರೂ ಸೇರಿ ನಿರ್ಣಯ ತೆಗೆದುಕೊಳ್ತೇವೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಕ್ಕೆ ಒತ್ತು ನೀಡುತ್ತೇವೆ. ಸದನದಲ್ಲಿ ಧರಣಿ ಕೂರುತ್ತೇನೆ. ಸದನದಲ್ಲಿ ಎದ್ದು ನಿಂತು ಸ್ಪೀಕರ್‌‌ಗೆ ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆ ತೆಗೆದುಕೊಳ್ಳಲು ಹೇಳ್ತೇನೆ. ತೆಗೆದುಕೊಳ್ಳದೆ ಇದ್ರೆ ಧರಣಿ ಮಾಡುತ್ತೇನೆ. ನಾಳೆಯೆ ಸಮಯ ಪಿಕ್ಸ್ ಮಾಡಬೇಕು. ಪ್ರತಿದಿನ ಉತ್ತರ ಕರ್ನಾಟಕ ಸಮಸ್ಯೆ ಚರ್ಚೆಗೆ ಸಮಯ ನಿಗಧಿ ಮಾಡಿ, ನಾಳೆ ಸ್ಪೀಕರ್ ಗೆ ಆಗ್ರಹ ಮಾಡ್ತೇನೆ. ಅವಕಾಶ ಕೊಡದೆ ಹೋದ್ರೆ ಧರಣಿ ಮಾಡ್ತೇನೆ ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande