ಬಿಜೆಪಿ ಮುಖಂಡನನ್ನು ಕಳೆದುಕೊಂಡ ಗದಗ ಜಿಲ್ಲೆ
ಗದಗ, 08 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಭಾರತೀಯ ಜನತಾ ಪಾರ್ಟಿ ಹಿರಿಯರು ಅಖಂಡ ಧಾರವಾಡ ಜಿಲ್ಲೆಯ ಮಾಜಿ ಬಿ.ಜೆ.ಪಿ ಜಿಲ್ಲಾಧ್ಯಕ್ಷರಾದ ಶ್ರೀ ಕೃಷ್ಣ ಹೊಂಬಾಳಿಯವರ ನಿಧನ ಅಸಂಖ್ಯಾತ ಕಾರ್ಯಕರ್ತರಲ್ಲಿ ಜೊತೆಗೆ ಅಖಂಡ ಧಾರವಾಡ ಜಿಲ್ಲೆಯ ಎಲ್ಲ ಜನರಿಗೆ ಅತ್ಯಂತ ದುಃಖವನ್ನು ತಂದಿದೆ ಅತ್ಯಂತ ಸರಳ ಮತ್ತು
ಫೋಟೋ


ಗದಗ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಭಾರತೀಯ ಜನತಾ ಪಾರ್ಟಿ ಹಿರಿಯರು ಅಖಂಡ ಧಾರವಾಡ ಜಿಲ್ಲೆಯ ಮಾಜಿ ಬಿ.ಜೆ.ಪಿ ಜಿಲ್ಲಾಧ್ಯಕ್ಷರಾದ ಶ್ರೀ ಕೃಷ್ಣ ಹೊಂಬಾಳಿಯವರ ನಿಧನ ಅಸಂಖ್ಯಾತ ಕಾರ್ಯಕರ್ತರಲ್ಲಿ ಜೊತೆಗೆ ಅಖಂಡ ಧಾರವಾಡ ಜಿಲ್ಲೆಯ ಎಲ್ಲ ಜನರಿಗೆ ಅತ್ಯಂತ ದುಃಖವನ್ನು ತಂದಿದೆ

ಅತ್ಯಂತ ಸರಳ ಮತ್ತು ಸಜ್ಜನ ವ್ಯಕ್ತಿಯಾದ ಶ್ರೀ ಕೃಷ್ಣ ಹೊಂಬಾಳಿ ಅವರು ಭಾರತೀಯ ಜನತಾ ಪಾರ್ಟಿಯ ಅತ್ಯಂತ ಹಿರಿಯ ನಾಯಕರೊಂದಿಗೆ ಒಡನಾಟ ಹೊಂದಿದವರು ಅಂದಿನ ಕಾಲದಲ್ಲಿ ಬೆರಳೆಣಿಕೆ ಮನೆಗಳು ಮಾತ್ರ ಸಂಘದ ಮನೆಗಳಾಗಿರುತ್ತಿದ್ದವು

ಶ್ರೀ ಕೃಷ್ಣ ಹೊಂಬಾಳಿಯವರ ತಂದೆಯವರಾದ ಶ್ರೀ ಪದ್ಮನಾಭಾಚಾರ ಹೊಂಬಾಳಿ ಇವರು ಜನಸಂಘದ ಕಾಲದಿಂದ ರಾಜಕಾರಣದಲ್ಲಿ ಗುರುತಿಸಿಕೊಂಡವರು

ಶ್ರೀ ಕೃಷ್ಣ ಹೊಂಬಾಳಿಯವರು ಗದಗ ನಗರಕ್ಕೆ ಭಾರತೀಯ ಜನತಾ ಪಾರ್ಟಿಯ ಹಿರಿಯರು ಬಂದರೆ ಹೆಚ್ಚು ಕಡಿಮೆ ಅವರ ಮನೆಗೆ ಭೇಟಿ ಇದ್ದೇ ಇರುತ್ತಿತ್ತು ಗಣಪತಿ ಹಬ್ಬ ಬಂದಾಗ ಜಗನ್ನಾಥ್ ರಾವ್ ಜೋಶಿ ಅವರ ಮನೆಗೆ ಭೇಟಿ ಕೊಡದೆ ಹೋಗುತ್ತಿರಲಿಲ್ಲ ಶ್ರೀ ಕೃಷ್ಣ ಹೊಂಬಾಳಿ ಅವರ ತಾಯಿಯವರಾದ ಶ್ರೀಮತಿ ತಾರಾಬಾಯಿ ಯವರು ಬಹುತೇಕ ಮುಖಂಡರಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದರು ಪ್ರಮೋದ್ ಮಹಾಜನ್, ಲಾಲ್ ಕೃಷ್ಣ ಅಡ್ವಾನಿ ಅವರ ಮನೆಗೆ ಭೇಟಿ ನೀಡಿದ್ದರು

ಅನಂತ್ ಕುಮಾರ್ ಅವರ ಒಡನಾಡಿ ಶ್ರೀ ಕೃಷ್ಣ ಹೊಂಬಾಳಿ ಅನಂತ್ ಕುಮಾರ್ ಸಂಘಟನೆಗೆ ಮಾತ್ರವಲ್ಲದೆ ಆತ್ಮೀಯ ಗೆಳೆಯರು ಸಹ ಹೌದು. ಅನಂತ್ ಕುಮಾರ್ ಗದಗ ನಗರಕ್ಕೆ ಬಂದರೆ ತೋಂಟದಾರ್ಯ ಮಠದ ಮುಂದಿನ ಮಿರ್ಚಿಯನ್ನು ಹೊಂಬಾಳಿಯವರ ಗದಗ್ ಪ್ರಿಂಟಿಂಗ್ ಪ್ರೆಸ್ ಗೆ ತರಿಸಲೇಬೇಕು ಪಕ್ಷದ ಸಂಘಟನೆ ಇಲ್ಲದ ಕಾಲದಲ್ಲಿ ಅನಂತ್ ಕುಮಾರ್ ರೊಂದಿಗೆ ವಿವಿಧ ಜವಾಬ್ದಾರಿಗಳನ್ನ ಪಡೆದುಕೊಂಡು ಪಕ್ಷ ಸಂಘಟನೆ ಮಾಡಿದವರು

ಗದಗ್ ಬೆಟಗೇರಿ ನಗರಸಭೆಯ ಸದಸ್ಯರಾಗಿ ಶ್ರೀಕೃಷ್ಣ ಹೊಂಬಾಳಿಯವರು ಅಂದಿನ ಕಾಲದಲ್ಲಿ ಅತ್ಯಂತ ಹೆಮ್ಮೆ ಪಡುವಂತ ಕೆಲಸವನ್ನು ಮಾಡಿದ್ದಾರೆ ಗದಗ್ ನಗರದ ಮರಾಠ ವಾಂಗಮಯ ಪ್ರೇಮಿ ಮಂಡಳ ಎದುರಿಗೆ ಇರುವ ರಸ್ತೆಗೆ ನಗರಸಭೆಯಿಂದ ವೀರ ಸಾವರ್ಕರ್ ರಸ್ತೆ ಎಂದು ನಾಮಕರಣ ಮಾಡಿದ್ದು ಆ ವಿಷಯವಾಗಿ ಅಂದಿನ ಆಡಳಿತಕ್ಕೆ ಮನವರಿಕೆ ಮಾಡಿ ಕೊಟ್ಟು ಈ ಕಾರ್ಯವನ್ನು ನಿರ್ವಹಿಸಿದ ಕೀರ್ತಿ ಕೃಷ್ಣ ಹೊಂಬಾಳಿ ಅವರಿಗೆ ಸಲ್ಲುತ್ತದೆ.

ವಿಜಯ ಸಂಕೇಶ್ವರ ಅವರ ಚುನಾವಣೆಯಲ್ಲಿ ಮತ್ತು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿಯವರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ನೇತೃತ್ವವನ್ನು ವಹಿಸಿಕೊಂಡು ಕೆಲಸ ಮಾಡಿದವರು ಸಿದ್ಧಾಂತಕ್ಕೆ ಬದ್ಧರಾದ ಹಿರಿಯ ಕಾರ್ಯಕರ್ತ ಹೊಂಬಾಳಿಯವರನ್ನು ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಗದಗ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿತ್ತು ಜನಪ್ರಿಯರಾದ ಶ್ರೀ ಕೃಷ್ಣ ಹೊಂಬಾಳಿಯವರು ಎಲ್ಲರಿಗೂ ಅಚ್ಚುಮೆಚ್ಚಿನ ನಾಯಕರಾಗಿದ್ದರು

ಅವರ ನಿಧನರಾದ ಸುದ್ದಿ ತಿಳಿದ ತಕ್ಷಣ ನೂರಾರು ಕಾರ್ಯಕರ್ತರು ಅವರ ಮನೆಗೆ ಧಾವಿಸಿ ಬಂದರು ಕಾರ್ಯಕರ್ತರ ಮಗಳ ಮದುವೆ ಸಂಭ್ರಮದಲ್ಲಿದ್ದ ಮಾಜಿ ಸಚಿವರಾದ ಕಳಕಪ್ಪ ಬಂಡಿ ಅವರು ತಕ್ಷಣ ಕೃಷ್ಣ ಹೊಂಬಾಳಿಯವರ ಮನೆಗೆ ಭೇಟಿ ನೀಡಿದರು. ಮಾಜಿ ಮುಖ್ಯಮಂತ್ರಿಗಳು ಸಂಸದರಾ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರು ಶಾಸಕರಾದ ಸಿ.ಸಿ. ಪಾಟೀಲ್ ಶಿರಹಟ್ಟಿ ಶಾಸಕರಾದ ಡಾಕ್ಟರ್ ಚಂದ್ರು ಲಮಾಣಿ ಜಿಲ್ಲಾಧ್ಯಕ್ಷರಾದ ರಾಜು. ಕುರುಡಗಿ ಸೇರಿದಂತೆ ನೂರಾರು ಕಾರ್ಯಕರ್ತರು ಶ್ರೀ ಕೃಷ್ಣ ಹೊಂಬಾಳಿ ಅವರ ನಿಧನ ಭಾರತೀಯ ಜನತಾ ಪಾರ್ಟಿಗೆ ತುಂಬಲಾರದ ನಷ್ಟ ಎಂದರು

ಗದಗ ನಗರ ಒಬ್ಬ ಹಿರಿಯ ಕಾರ್ಯಕರ್ತನನ್ನು ಸಮಾಜ ಸೇವಕರನ್ನು ಕಳೆದುಕೊಂಡಂತಾಗಿದೆ

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande